ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದ ರಿಲಿ ರೊಸೊ ಟಿ20 ಆವೃತ್ತಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು.
ಇಂದೋರ್ ನ ಹೋಲ್ಕರ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ನಡೆದ ಮೂರನೆ ಟಿ20 ಪಂದ್ಯದಲ್ಲಿ ನಡೆದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 227 ರನ್ ಕಲೆ ಹಾಕಿತು.
ಓಪನರ್ ಕ್ವಿಂಟಾನ್ ಡಿಕಾಕ್ (68 ರನ್) ಉತ್ತಮ ಆರಂಭ ನೀಡಿದರು.ಮೂರನೆ ಕ್ರಮಾಂಕದಲ್ಲಿ ಬಂದ ರಿಲಿ ರೊಸೊ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ರೊಸೊ 48 ಎಸೆತದಲ್ಲಿ 7 ಬೌಂಡರಿ 8 ಸಿಕ್ಸರ್ ಸಹಿತ ಅಜೇಯ 100 ಚಚ್ಚಿದರು. ರೊಸೊ 27 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.ನಂತರ 48 ಎಸೆತದಲ್ಲಿ ಶತಕ ಸಿಡಿಸಿದರು.
ಕ್ವಿಂಟಾನ್ ಡಿಕಾಕ್ ಜೊತೆ 117 ರನ್ಗಳ ಭರ್ಜರಿ ಜೊತೆಯಾಟ ಆಡಿದರು. ರೊಸೊ ಅಬ್ಬರದಿಂದಾಗಿ ಸೌತ್ ಆಫ್ರಿಕಾ 14.4 ಓವರ್ ಗಳಲ್ಲಿ 150 ರನ್ ಗಡಿ ಮುಟ್ಟಿತ್ತು.
ಟ್ರಿಸ್ಟನ್ ಸ್ಟಬ್ಸ್ ಜೊತೆಗೂಡಿ 26 ಎಸೆತದಲ್ಲಿ 50 ರನ್ ಕಲೆ ಹಾಕಿದರು.18.4 ಓವರ್ ವೇಳೆಗೆ ದ.ಆಫ್ರಿಕಾ 200 ರನ್ ಗಡಿ ತಲುಪಿತು