Women’s EURO 2022 – ಸೆಮಿಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಮಹಿಳಾ ತಂಡ

ಯುರೋ ಕಪ್ ಮಹಿಳಾ ಫುಟ್ ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಹೆಚ್ಚುವರಿ ಅವಧಿಯ ಆಟದಲ್ಲಿ ಗೋಲು ದಾಖಲಿಸಿ ಸ್ಪೇನ್ ತಂಡವನ್ನು ನಿರಾಸೆಗೊಳಿಸಿತು.
ನಿಗದಿತ ಅವಧಿಯಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಸಮಬಲದ ಹೋರಾಟವನ್ನೇ ನಡೆಸಿದ್ದವು. ಆದ್ರೆ ಹೆಚ್ಚುವರಿ ಅವಧಿಯಲ್ಲಿ ಇಂಗ್ಲೆಂಡ್ ತಂಡದ ಜಿಯೊರ್ಗಿಯಾ ಸ್ಟಾನ್ ವೇ ಅವರು ಅದ್ಭುತ ಗೋಲು ದಾಖಲಿಸಿ ತಂಡವನ್ನು ಗೆಲುವಿನ ಖುಷಿಯಲ್ಲಿ ತೇಲಾಡುವಂತೆ ಮಾಡಿದ್ದರು.
ಇಂಗ್ಲೆಂಡ್ ಮಹಿಳಾ ತಂಡ ಸೆಮಿಫೈನಲ್ ನಲ್ಲಿ ಸ್ವೀಡನ್ ಅಥವಾ ಬೆಲ್ಜಿಯಂ ತಂಡವನ್ನು ಎದರಿಸಲಿದೆ.
ಇಂಗ್ಲೆಂಡ್ ತಂಡ ಸತತ 18 ಪಂದ್ಯಗಳನ್ನು ಗೆಲ್ಲುತ್ತಾ ಬಂದಿದೆ. ಅಲ್ಲದೆ ಯುರೋ ಕಪ್ ಟೂನಿಯಲ್ಲಿ ಸತತವಾಗಿ ನಾಲ್ಕನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.
ಇನ್ನೊಂದು ಕ್ವಾರ್ಟರ್ ಫೈನಲ್ ನಲ್ಲಿ ಸ್ವೀಡನ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಲಿವೆ.