ಪಂದ್ಯದ ಯಾವುದೇ ಹಂತದಲ್ಲೂ ಭಾರತೀಯ ಮಹಿಳಾ (Indiawomens) ತಂಡದ ವಿರುದ್ಧ ಶ್ರಿಲಂಕಾ ಮಹಿಳೆಯರು (Srilanka Womens) ಸವಾಲು ಎಂದು ಅನಿಸಲೇ ಇಲ್ಲ. ಬೌಲಿಂಗ್‌ನಲ್ಲೇ ಲಂಕಾದ (Srilanka) ಬ್ಯಾಟಿಂಗ್ ಬೆನ್ನೆಲುಬು ಮುರಿದ ಹರ್ಮನ್ ಬಳಗ (Harmapreet Kaur) ನಂತರ ಬ್ಯಾಟಿಂಗ್‌ನಲ್ಲೂ ಎಡವದೆ ಏಷ್ಯಾಕಪ್ (Womens Asiacup) ಚಾಂಪಿಯನ್ (Champion) ಆಗಿ ಹೊರಹೊಮ್ಮಿದೆ. ಬಾಂಗ್ಲಾದೇಶದಲ್ಲಿ (Bangladesh) ತನ್ನ ಶಕ್ತಿಯ ಪರಿಚಯ ಮಾಡಿಕೊಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮಹಿಳಾ ತಂಡ ಯಾವುದೇ ಹಂತದಲ್ಲೂ ಭಾರತದ (India)ಬೌಲರ್‌ಗಳಿಗೆ ಸವಾಲಾಗಲಿಲ್ಲ. ನಾಯಕ ಚಾಮರಿ ಅಟ್ಟಪಟ್ಟು (6) ರನೌಟ್ ಬಲೆಯಲ್ಲಿ ಬಿದ್ದರೆ, ರೇಣುಕಾ ಸಿಂಗ್ ಹರ್ಷಿತಾ ಸಮರವಿಕ್ರಮ (1), ಹಾಸಿನಿ ಪೆರಾರ (0) ಮತ್ತು ಕವಿಶಾ ದಿಲ್ಹಾರಿ (1) ವಿಕೆಟ್ ಬೆನ್ನು ಬೆನ್ನಿಗೆ ಕಬಳಿಸಿದರು. ಅನುಷ್ಕಾ ಸಂಜೀವಿನಿ (2) ರನೌಟ್ ಆದರೆ, ನಿಲಾಕ್ಷಿ ಡಿ ಸಿಲ್ವಾ (6) ರಾಜೇಶ್ವರಿ ಗಾಯಕ್ವಾಡ್‌ಗೆ ಬಲಿಯಾದರು.
ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಶ್ರೀಲಂಕಾ ರನ್‌ಗಾಗಿ ಪರದಾಟ ನಡೆಸಿತು. ಸ್ನೇಹ್ ರಾಣಾ ಮಾಲ್ಶಾ ಮತ್ತು ಸುಗಂಧೀಕಾ ವಿಕೆಟ್ ಹಾರಿಸಿದರು. ಇನೊಕಾ ರಣವೀರ (ಅಜೇಯ 18) ಮತ್ತು ಒಶಾಡಿ ರಣಸಿಂಘೆ (13) ಮಾತ್ರ ಎರಡಂಕಿ ಮೊತ್ತ ಮುಟ್ಟಿದರು. ಶ್ರೀಲಂಕಾ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 65ರನ್ ಮಾತ್ರ ಗಳಿಸಿತ್ತು. ಭಾರತದ ಪರ ರೇಣುಕಾ ಸಿಂಗ್ (Renuka Singh) 5 ರನ್‌ಗೆ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad)ಮತ್ತು ಸ್ನೇಹ್ ರಾಣಾ (Sneh rana) ತಲಾ 2 ವಿಕೆಟ್ ಪಡೆದರು.
ಸುಲಭ ಚೇಸಿಂಗ್ ಆರಂಭಿಸಿದ ಭಾರತಕ್ಕೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ 32 ರನ್‌ಗಳ ಬಿರುಸಿನ ಆರಂಭ ತಂದುಕೊಟ್ಟರು. ಆದರೆ ಶಫಾಲಿ ೫ ರನ್‌ಗಳಿಸಿ ನಿರ್ಗಮಿಸಿದರೆ, ಅವರ ಹಿಂದೆ ಬಂದ ಜೆಮಿಮಾ ರೊಡ್ರಿಗಸ್ 2 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಸ್ಮೃತಿ ಮಂದಾನ ಲಂಕಾ ಬೌಲರ್‌ಗಳ ಚಳಿ ಬಿಡಿಸಿದರು. ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಗೆಲುವನ್ನು ಸುಲಭವಾಗಿಸಿದರು. ಮಂದಾನಾ 25 ಎಸೆತಗಳಲ್ಲಿ 6 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 51 ರನ್‌ಗಳಿಸಿದರು. ಹರ್ಮನ್ ಅಜೇಯ 11 ರನ್ ಬಾರಿಸಿದರು. ಭಾರತ 8.3 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ಚಾಂಪಿಯನ್ ಆಗಿ ಕುಣಿದಾಡಿತು.