ಎರಡನೆ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಮುಂದುವರಿಯಲು ನಿರಾಕರಿಸಿದ ಬೆನ್ನಲ್ಲೆ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸ್ವತಃ ಸೌರವ್ ಗಂಗೂಲಿ ಹೇಳಿದ್ದು ಅ,31ರಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ಗೆ ಚುನಾವಣೆ ನಡೆಯಲಿದೆ.
ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷಾಗಿ ಮುಂದುವರೆಯಲು ಇಚ್ಛಿಸಿದ್ದರು. ಆದರೆ ಐಪಿಎಲ್ ಚೇರ್ ಮನ್ ಆಗುವಂತೆ ಆಫರ್ ನೀಡಲಾಗಿತ್ತು.
ಒಂದು ವೇಳೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಗೆದ್ದರೆ ಎರಡನೆ ಅವಧಿಗೆ ಆಯ್ಕೆಯಾಗಲಿದ್ದಾರೆ. 2015ರಿಂದ 2019ರವೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಅ.18ಕ್ಕೆ ಬಿಸಿಸಿಐ ವಿಶೇಷ ವಾರ್ಷಿಕ ಸಭೆಯನ್ನು ಹಮ್ಮಿಕೊಂಡಿದೆ. ಕನ್ನಡಿಗ ರೋಜರ್ ಬಿನ್ನಿ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದಾರೆ. ಜಯ್ ಶಾ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಸಭಾ ಸದಸ್ಯ ರಾಜೀವ್ ಶುಕ್ಲಾ ಬಿಸಿಸಿಐನ ಉಪಾಧ್ಯಕ್ಷನಾಗಿ ಮುಂದುವರೆಯಲಿದ್ದಾರೆ. ಮಂಡಳಿಯಲ್ಲಿ ಇಬ್ಬರು ಹೊಸ ಮುಖಗಳು ಬರಲಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಆಶೀಶ್ ಶೇಲಾರ್ ಖಜಾಂಚಿಯಾಗಿ ಕಾರ್ಯನರ್ವಹಿಸಲಿದ್ದಾರೆ.
ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ನ ದೇವಜೀತ್ ಸಾಯಿಕಾ ಜಂಟಿ ಖಜಾಂಚಿಯಾಗಿ ಕಾರ್ಯನರ್ವಹಿಸಲಿದ್ದಾರೆ.