ಶ್ರೀಲಂಕಾ ವನಿತೆಯರ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ರೋಚಕವಾಗಿ ಗೆದ್ದು ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದೆ.
ಬಾಂಗ್ಲಾದೇಶದ ಸಿಲೆಟ್ನಲ್ಲಿ ನಡೆದ ಸೆಮಿಫೈನಲ್ ನಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 122 ರನ್ ಕಲೆ ಹಾಕಿತು. ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿತು.
123 ರನ್ ಗುರಿ ಬೆನ್ನತ್ತಿದ ಪಾಕ್ ತಂಡ ಮುನೀಬಾ ಅಲಿ 18, ಸಿದ್ರಾ ಅಮೀನ್ 9 ,ನಾಯಕಿ ಬಿಸ್ಮಾ ಮಾರೂಫ್ 42 ರನ್, ಇದಾ ಧಾರ್ 26 ರನ್ ಕಲೆ ಹಾಕಿದರು. ಒಮಾನಿಯಾ ಸೋಯೇಲ್ 10, ಆಯೇಶಾ ನಾಸೀಮ್ ಹಾಗೂ ಅಲಿಯಾ ರೀಯಾಜ್ ತಲಾ 2 ರನ್ ಗಳಿಸಿದರು. ಕೊನೆಯಲ್ಲಿ ಪಾಕ್ 1 ರನ್ ಗಳಿ ವಿರೋಚಿತ ಸೋಲು ಅನುಭವಿಸಿ ಟುರ್ನಿಯಿಂದ ಹೊರ ಬಿತ್ತು.
ಲಂಕಾ ಇನೊಕಾ ರಾಣವೀರಾ 17ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಸುಗಂಧಿಕಾ ಕುಮಾರಿ, ಕವಿಶಾ ದಿಲಹಾರಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಲಂಕಾ ಪರ ಅನುಷ್ಕಾ ಸಂಜೀವಿನಿ 26,ಹರ್ಷಿತಾ ಸಮರವಿಕ್ರಮಾ 35, ನೀಲಾಕ್ಷಿ ಡಿಸಿಲ್ವಾ 14 ರನ್ ಗಳಿಸಿದರು. ಇನೊಕಾ ರಾಣವೀರಾ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.