Syed Mushtaq Ali Trophy: ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಕರ್ನಾಟಕ
ಕೇರಳ ವಿರುದ್ಧ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಕಾದಾಟ ನಡೆಸಲಿದ್ದು, ಜಯದ ಲಯಕ್ಕೆ ಮರಳಲು ಪ್ಲಾನ್ ಮಾಡಿಕೊಂಡಿದೆ.
ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿರುವ ಕರ್ನಾಟಕ ಹಾಗೂ ಮೇಘಾಲಯ ತಂಡಗಳು ತಲಾ ನಾಲ್ಕು ಅಂಕಗಳನ್ನು ಕಲೆ ಹಾಕಿವೆ. ಆದರೆ ಕರ್ನಾಟಕದ ರನ್ ಸರಾಸರಿ ಉತ್ತಮವಾಗಿದ್ದು ನಾಲ್ಕನೇ ಸ್ಥಾನದಲ್ಲಿದೆ.
ಎರಡನೇ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಕನಸು ಕರ್ನಾಟಕ ತಂಡದ್ದಾಗಿದೆ. ಕೇರಳ ವಿರುದ್ಧ ರನ್ ಕಲೆ ಹಾಕಲು ವಿಫಲರಾಗಿದ್ದ ಮೆಲ್ಪಂಕ್ತೀಯ ಆಟಗಾರರು ಮೂರನೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ದೇವದತ್ ಪಡಿಕ್ಕಲ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿವೆ. ನಾಯಕ ಮಯಾಂಕ್ ಅಗರ್ ವಾಲ್ ಹಾಗೂ ಅನುಭವಿ ಆಟಗಾರ ಮನೀಷ್ ಪಾಂಡೆ ಎದುರಾಳಿ ಬೌಲರ್ ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡಬೇಕಿದೆ. ಇನ್ನು ಎಲ್.ಆರ್ ಚೇತನ್, ಸಿಸೋಡಿಯಾ, ಅಭಿನವ್ ಮನೋಹರ್ ತಮ್ಮ ನೈಜ ಆಟವನ್ನು ಆಡುವ ಅನಿವಾರ್ಯತೆ ಇದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ವಿಜಯಕುಮಾರ್ ವೈಶಾಕ್ ಬಿಗುವಿನ ದಾಳಿ ನಡೆಸಬೇಕಿದೆ. ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳುವ ಜೆ.ಸುಚಿತ್ ಹಾಗೂ ಕೆ.ಗೌತಮ್ ಶಿಸ್ತು ಬದ್ಧ ಬೌಲಿಂಗ್ ಮಾಡಿ ಎದುರಾಳಿಯನ್ನು ಕಟ್ಟಬೇಕಿದೆ.
ಮೇಘಾಲಯ ತಂಡ ಸಂಘಟಿತ ಆಟದ ಪ್ರದರ್ಶಿಸಿ ಜಯದ ನಗೆ ಬೀರುವ ಕನಸು ಕಾಣುತ್ತಿದೆ.
Syed Mushtaq Ali Trophy, Karnataka, T-20,