ಶಫಾಲಿ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದೆ.
ಬಾಂಗ್ಲಾದೇಶದ ಸಿಲೆಟ್ ನಲ್ಲಿ ನಡೆದ ಥೈಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ 74 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕಟ್ ನಷ್ಟಕ್ಕೆ 148 ರನ್ ಕಲೆ ಹಾಕಿತು. ಥೈಲೆಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು.
ಭಾರತ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ (28 ಎಸೆತ 5 ಬೌಂಡರಿ, 1 ಸಿಕ್ಸರ್) 42 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 36, ಜೆಮಿಮ್ಮಾ ರಾಡ್ರಿಗಸ್ 27 ರನ್ ಕಲೆ ಹಾಕಿದರು. ಥೈಲೆಂಡ್ ಪರ ಟಿಪೊಕ್ 24ಕ್ಕೆ 3 ವಿಕೆಟ್ ಪಡೆದರು.
149 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಥೈಲೆಂಡ್ ಪರ ನಾಯಕಿ ಚಾಯ್ ವಾಯ್ ಹಾಗೂ ನಟ್ಠಾಯ ಬೂಚಾಂತಮ್ ತಲಾ 21 ರನ್ ಗಳಿಸಿದರು. ಇನ್ನುಳಿದ ಬ್ಯಾಟರ್ ಗಳು ಒಂದಂಕಿ ರನ್ ಹೊಡೆದರು.
ಭಾರತ ಪರ ದೀಪ್ತಿ ಶರ್ಮಾ 7ಕ್ಕೆ 3 ವಿಕೆಟ್ ಪಡೆದರು. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 10ಕ್ಕೆ 2 ವಿಕೆಟ್ ಪಡೆದರು.