T20 ವಿಶ್ವಕಪ್ ಆರಂಭಕ್ಕೆ ಭರ್ಜರಿ ತಯಾರಿಯಲ್ಲಿರುವ ಟೀಂ ಇಂಡಿಯಾ(Team India), ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್(Western Australia) ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯ(practice match)ದಲ್ಲಿ ಸೋಲಿನ ಆಘಾತ ಅನುಭವಿಸಿದೆ.
ಪರ್ಥ್‌ನ ವೆಸ್ಟ್‌ರ್ನ್ ಆಸ್ಟ್ರೇಲಿಯಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 168 ರನ್‌ಗಳಿಸಿತು. ಆದರೆ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಆಟಗಾರ ಕೆ.ಎಲ್.ರಾಹುಲ್(KL Rahul)(74) ಏಕಾಂಗಿ ಹೋರಾಟದ ನಡುವೆಯೂ 36 ರನ್‌ಗಳ ಸೋಲು ಕಂಡಿತು.
ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ ಕನ್ನಡಿಗ ಕೆ.ಎಲ್.ರಾಹುಲ್, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಆರಂಭಿಕ ಆಘಾತದ ನಡುವೆಯೂ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್, ಡಿ’ಆರ್ಸಿ ಶಾರ್ಟ್(52) ಹಾಗೂ ನಿಕ್ ಹಾಬ್ಸನ್(64) ಅವರ ಅದ್ಭುತ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 168 ರನ್‌ಗಳಿಸಿತು. ಭಾರತದ ಪರ ಆರ್. ಅಶ್ವಿನ್ 3 ಹಾಗೂ ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು.
ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ನೀಡಿದ 169 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್, 55 ಬಾಲ್‌ಗಳಲ್ಲಿ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 74 ರನ್‌ಗಳಿಸಿ ಮಿಂಚಿದರು. ಆದರೆ ಟೀಂ ಇಂಡಿಯಾದ ಉಳಿದ ಆಟಗಾರರು ನಿರೀಕ್ಷಿತ ಆಟವಾಡಲಿಲ್ಲ. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಪಂತ್(9), ದೀಪಕ್ ಹೂಡ(6), ಹಾರ್ದಿಕ್ ಪಾಂಡ್ಯ(17), ಅಕ್ಸರ್ ಪಟೇಲ್(2), ದಿನೇಶ್ ಕಾರ್ತಿಕ್(10) ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿ ಹೊರನಡೆದರು. ಪರಿಣಾಮ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್‌ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇದ್ದರೂ ಬ್ಯಾಟಿಂಗ್ ಮಾಡಲಿಲ್ಲ.