ಏಷ್ಯಾ ಕಪ್‍ನ ಮಹಿಳಾ ಪಂದ್ಯದಲ್ಲಿ ಇಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಬಾಂಗ್ಲಾದೇಶದ ಸಿಲೆಟ್ ಮೈದಾನದಲ್ಲಿ ಮಹತ್ವದ ಪಂದ್ಯ ನಡೆಯಲಿದೆ. ಕಳೆದ ಎರಡು ಪಂದ್ಯಗಳಿಂದ ನಾಯಕಿ ಹರ್ಮನ್ ಪ್ರೀತ್ ಕೌರ್ ಪ್ರಯೋಗಗಳನ್ನು ಮಾಡಿ ಯುವ ಆಟಗಾರ್ತಿಯರಿಗೆ ಅವಕಾಶ ಕೊಟ್ಟು ಎಂಟು ಬದಲಾವಣೆಗಳನ್ನು ಮಾಡಿತ್ತು. ಆದರೆ ಪಾಕ್ ವಿರುದ್ಧದ ಇಂದಿನ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಯಲಿದೆ.
ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಶಿಶು ಥಾಯ್‍ಲ್ಯಾಂಡ್ ವಿರುದ್ಧ ನಾಲ್ಕು ವಿಕೆಟ್‍ಗಳ ವಿರೋಚಿತ ಸೋಲು ಅನುಭವಿಸಿತು.
ಸದ್ಯ ಅಂಕಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲೆರಡು ಸ್ಥಾನಗಳಲ್ಲಿವೆ. ಹರ್ಮನ್ ಪಡೆ ಆಡಿದ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ.
ಭಾರತ – ಪಾಕಿಸ್ತಾನ ಕದನವೆಂದರೆ ಸಾಕಷ್ಟು ಕುತೂಹಲ ಇರುತ್ತವೆ. ಆದರೆ ಈ ಹಿಂದಿನ ಎರಡೂ ಪಂದ್ಯಗಳಲ್ಲಿ ರೋಚಕತೆ ಇರಲಿಲ್ಲಘಿ. ಭಾರತ ಸುಲಭವಾಗಿ ಗೆದ್ದುಕೊಂಡಿತ್ತು.ತಂಡದ ತಾರಾ ಬ್ಯಾಟರ್‍ಗಳಾದ ಶಾಲಿ ವರ್ಮಾ ಹಾಗೂ ಸ್ಮತಿ ಮಂಧಾನಾ ಇವರಿಂದ ಭರ್ಜರಿ ಆರಂಭ ನಿರೀಕ್ಷಿಸಲಾಗಿದೆ.
ಸ್ಮತಿ ಮಂಧಾನ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಒಳ್ಳೆಯ ಫಾರ್ಮ್‍ನಲ್ಲಿದ್ದು ಇತ್ತಿಚೆಗೆ ಆಂಗ್ಲರ ನಾಡಲ್ಲಿ ರನ್ ಮಳೆ ಸುರಿಸಿದ್ದರು.
ಗಾಯದಿಂದ ಹೊರ ಬಂದಿರುವ ಜೆಮಿಮಾ ರಾಡ್ರಿಗಸ್ 2 ಅರ್ಧ ಶತಕ ಸಿಡಿಸಿ ತಂಡಕ್ಕೆ ಒಳ್ಳೆಯ ಲಯ ಪಡೆದು ಮರಳಿದ್ದಾರೆ. ಯುಎಇ ವಿರುದ್ಧ ದೀಪ್ತಿ ಶರ್ಮಾ ಆಲ್ರೌಂಡ್ ಆಟ ಗಮನ ಸೆಳೆದಿದೆ. ಮೂರು ಪಂದ್ಯಗಳಲ್ಲೂ ತಂಡದ ಬೌಲರ್‍ಗಳು ಮಿಂಚಿದ್ದಾರೆ.
ಇನ್ನು ಪಾಕಿಸ್ತಾನ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದ್ದು ಮಲೇಷ್ಯಾ ಹಾಗು ಆತಿಥೇಯ ಬಾಂಗ್ಲಾಪ್ರದೇಶ ವಿರುದ್ಧ ತಿಣುಕಾಡಿ ಗೆದ್ದಿದೆ. ಪಾಕ್ ತಂಡದಲ್ಲಿ ದೊಡ್ಡ ಮೊತ್ತ ಪೇರಿಸುವ ಬ್ಯಾಟರ್‍ಗಳಿಲ್ಲ. ಆರಂಭಿಕ ಬ್ಯಾಟರ್ ಸಿದ್ರಾ ಅಮೀನ್ ಅರ್ಧ ಶತಕ ಸಿಡಿಸಿದ್ದು ಬಿಟ್ಟರೆ ಬೇರೆ ಯಾರು ಆಡಿಲ್ಲ. ಕ್ರಿಕೆಟ್ ಶಿಶು ಥಾಯ್‍ಲ್ಯಾಂಡ್ ವಿರುದ್ಧ 120 ರನ್ ಗಡಿ ಮುಟ್ಟುವಲ್ಲಿ ವಿಫಲವಾಯಿತು.
ಸಂಭಾವ್ಯ ತಂಡಗಳು
ಭಾರತ: ಹರ್ಮನ್‍ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧಾನ, ದೀಪ್ತಿ ಶರ್ಮಾ, ಶಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಾಬ್‍ನೇನಿ ರಾಡ್ರಿಗಸ್, ಮೇಘನಾ, ರಿಚಾ ಘೋಶ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಡಿ. ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸಕಾರ್, ರಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ನವಿಗ್ರೆ.
ಪಾಕಿಸ್ತಾನ: ಬಿಸ್ಮಾ ಮಾರೂಫ್ (ನಾಯಕಿ), ಐಮಾನ್ ಅನ್ವಾರ್, ಆಯೇಶಾ ನಾಸೀಮ್, ಡೈಯಾನಾ ಬೈಯಾಗ್, ಇಮ್ತಿಯಾಜ್, ಮುನೀಬಾ ಅಲಿ, ಒಮಾನಿಯಾ ಸೋಯೆಲ್, ಸಾದ್ ಶಾಮಾಸ್, ಸಾಯಾ ಇಕ್ಬಲ್, ಸಿದ್ರಾ ಅಮೀನ್, ಸಿದ್ರಾ ನವಾಜ್, ತುಬಾ ಹಸನ್.
ಪಂದ್ಯ : ಮಧ್ಯಾಹ್ನ 1 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್