![Womens Asia Cup ಟೂರ್ನಿಯಿಂದ ಹೊರ ಬಿದ್ದ ಹಾಲಿ ಚಾಂಪಿಯನ್ ಬಾಂಗ್ಲಾದೇಶ 2 thailand 3 e1665482361627](http://sportskarnataka.com/wp-content/uploads/2022/10/thailand-3-e1665482361627-300x225.png)
ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡ ಟೂರ್ನಿಯಿಂದ ಹೊರ ಬಿದ್ದು ಆಘಾತ ಅನುಭವಿಸಿದೆ. ಥೈಲೆಂಡ್ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಹಾಕಿದೆ.
ಬಾಂಗ್ಲಾದೇಶದ ಸಿಲೆಟ್ ನಲ್ಲಿ ಇಂದು ಆತಿಥೇಯ ಬಾಂಗ್ಲಾ ಹಾಗೂ ಯುಎಇ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ರದ್ದಾಯಿತು.
ಈ ಪಂದ್ಯವನ್ನು ಹಾಲಿ ಚಾಂಪಿಯನ್ ಬಾಂಗ್ಲಾದೇಶ ಥೈಲೆಂಡ್ ಸೆಮಿಫೈನಲ್ಗೆ ಹೋಗುವುದನ್ನು ತಡೆಯಲು ಗೆಲ್ಲಲೇಬೇಕಾಗಿತ್ತು. ಆದರೆ ವರುಣ ಬಾಂಗ್ಲಾ ವನಿತೆಯರ ಪಾಲಿಗೆ ವಿಲನ್ ಆಗಿಬಿಟ್ಟ.
ಲೀಗ್ ನಲ್ಲಿ ಬಾಂಗ್ಲಾ 5 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಅಂಕವನ್ನು ಪಡೆದವು. ಥೈಲೆಂಡ್ ಗಿಂತ ಒಂದು ಅಂಕ ಕಡಿಮೆ ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದೆ.
ತವರಿನಲ್ಲಿ ಆಡಿದ ಬಾಂಗ್ಲಾ ಬಲಿಷ್ಠ ತಂಡಗಳೆದುರು ಕಳಪೆಯಾಗಿ ಬ್ಯಾಟಿಂಗ್ ಮಾಡಿದ್ದೆ ಸೋಲಿಗೆ ಕಾರಣವಾಗಿದೆ.
ಇನ್ನು ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಅಚ್ಚರಿ ನೀಡಿತ್ತು. ಇದೀಗ ಸೆಮಿಫೈನಲ್ಗೆ ಪ್ರವೇಶಿಸಿ ಮತ್ತೊಂದು ಅಚ್ಚರಿ ನೀಡಿದೆ.
ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಸೆಣಸಲಿದೆ. ಮತ್ತೊಂದು ಸೆಮಿಫೈನಲ್ ನಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ಹರ್ಮನ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಲೀಗ್ ಅನ್ನು ಪೂರ್ಣಗೊಳಿಸಿದೆ.