Womens Asia cup 2022- ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ
ಮಹಿಳಾ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಪಾಕ್ ವಿರುದ್ದ ಅಚ್ಚರಿಯ ಸೋಲಿನ ಬಳಿಕ ಭಾರತ ಮಹಿಳಾ ತಂಡ ಎಚ್ಚೆತ್ತುಕೊಂಡಿತ್ತು. ಪರಿಣಾಮ ಹರ್ಮನ್ ಪ್ರಿತ್ ಬಳಗ 59 ರನ್ ಗಳಿಂದ ಬಾಂಗ್ಲಾದೇಶ ಮಹಿಳಾ ತಂಡವನ್ನು ಪರಾಭವಗೊಳಿಸಿತ್ತು.
ಭಾರತದ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು 44 ಎಸೆತಗಳಲ್ಲಿ ಆಕರ್ಷಕ 55 ರನ್ ದಾಖಲಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮಹಿಳಾ ತಂಡ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಶಫಾಲಿ ವರ್ಮಾ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 55 ರನ್ ಗಳಿಸಿದ್ರೆ, ಸ್ಮøತಿ ಮಂದಾನ 47 ರನ್ ಸಿಡಿಸಿದ್ರು. ಜೆಮಿಮಾಹ್ ರೋಡ್ರಿಗಸ್ ಅಜೇಯ 35 ರನ್ ಗಳಿಸಿದ್ರು
ಗೆಲ್ಲಲು 160 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 59 ರನ್ ಗಳಿಸಲಷ್ಟೇ ಶಕ್ತವಾಯ್ತು. ಬಾಂಗ್ಲಾ ದೇಶ ಪರ ಫರ್ಗಾನಾ ಹಕ್ 30 ರನ್, ಮುಶೀದ ಖಾಟನ್ 21 ರನ್ ಹಾಗೂ ನಿಗಾರ್ ಸುಲ್ತಾನಾ 36 ರನ್ ಗಳಿಸಿದ್ರು. ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಭಾರತ ಪರ ಬೌಲಿಂಗ್ ನಲ್ಲಿ ದೀಪ್ತಿ ರ್ಮಾ ಮತ್ತು ಶಫಾಲಿ ವರ್ಮಾ ತಲಾ ಎರಡು ವಿಕೆಟ್ ಉರುಳಿಸಿದ್ರು. ಆಲ್ ರೌಂಡ್ ಆಟನ್ನಾಡಿದ್ದ ಶಫಾಲಿ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.