ನವೋರೆಮ್ ರೋಶನ್ ಸಿಂಗ್ ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಎಫ್.ಸಿ 1-0ಯಿಂದ ಕೇರಳಾ ಬ್ಲಾಸ್ಟರ್ಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಬಿಎಫ್ ಸಿ 14 ಪಂದ್ಯಗಳಲ್ಲಿ 5 ಜಯ, 5 ಸೋಲು, 4 ಡ್ರಾ ಸಾಧಿಸಿದ್ದು 20 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕೇರಳಾ ಇಷ್ಟೇ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಈ ಪಂದ್ಯದ ವೇಳೆ ಬೆಂಗಳೂರು, ಕೇರಳಾಕ್ಕೆ ಹೋಲಿಸಿದರೆ ಚೆಂಡಿನ ಮೇಲೆ ಕಡಿಮೆ ಹಿಡಿತ ಸಾಧಿಸಿದರೂ, ಧೃತಿ ಗೆಡಲಿಲ್ಲ. ಬೆಂಗಳೂರು ತಂಡ 4 ಬಾರಿ ಗೋಲು ಬಾರಿಸುವ ಪ್ರಯತ್ನ ಮಾಡಿದರೆ, ಕೇರಳಾ ಐದು ಬಾರಿ ಅಂಕಗಳಿಸುವ ಯತ್ನವನ್ನು ಮಾಡಿತು. ಮೊದಲಾವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಆಸೆಗೆ ಫಲಿಸಲಿಲ್ಲ.
ಎರಡನೇ ಅವಧಿಯಲ್ಲಿ ಸಮಯೋಚಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ಅಬ್ಬರಿಸಿತು. ಸಿಕ್ಕ ಅವಕಾಶದಲ್ಲಿ ಬೆಂಗಳೂರು ಅಂಕ ಕಲೆ ಹಾಕಿತು. ನವೋರೆಮ್ ರೋಶನ್ ಸಿಂಗ್ ಪೆನಾಲ್ಟಿ ಅವಕಾಶದಲ್ಲಿ ಎದುರಾಳಿ ಗೋಲಿಯನ್ನು ವಂಚಿಸಿದರು.
ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಅವಕಾಶವನ್ನು ಕೇರಳ ಕೈ ಚೆಲ್ಲಿತು.