ನಾನ್ನಪತ್ ಕೊಂಚಾರೊಯೆನಕಾಯ್ ಅವರ ಅಮೋಘ ಬ್ಯಾಟಿಂಗ್ ನೆರೆವಿನಿಂದ ಥೈಲ್ಯಾಂಡ್ ಮಹಿಳಾ ತಂಡ ಮಲೇಷ್ಯಾ ವಿರುದ್ಧ 50 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಬಾಂಗ್ಲಾದ ಸಿಲೆಟ್ ನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಮಹಿಳಾ ಟೂರ್ನಿಯ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಥೈಲ್ಯಾಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್ ಗಳಸಿತು. ಮಲೇಷ್ಯಾ ಮಹಿಳಾ ತಂಡ 8 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತು.
ಥೈಲ್ಯಾಂಡ್ ಪರ ನಾನ್ನಪತ್ ಕೊಂಚಾರೊಯೆನಕಾಯ್ 41, ಚಾಂತಮ್ 10, ನಾಯಕಿ ನಾರುಮೊಲ್ ಚೈವಾಯಿ 28,
ಚಾನೈದಾ ಶುತ್ತಿರುಹುಹಾಂಗ್ 24 ರನ್, ಕಾನ್ಹೊ4, ಪಾನ್ನಿತಾ ಮಾಯಾ ಅಜೇಯ 3 ರನ್ ಗಳಿಸಿದರು.
ಮಲೇಷ್ಯಾ ಪರ ಎಲ್ಸಾ ಹಂಟರ್ 15, ವಿನ್ ಫ್ರೈಡ್ 15, ಮಾಹಿರ್ಹಾ ಇಸ್ಮಾಯಿಲ್ 17 ರನ್ ಗಳಿಸಿದರು. ಥಿಪಾಟ್ಚಾವಾಂಗ್ ಪುಥಾವಾಂಗ್ 7ಕ್ಕೆ 2 ವಿಕೆಟ್ ಪಡೆದರು. ನಾನ್ನಪತ್ ಕೊಂಚಾರೊಯೆನಕಾಯ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.