Surya kumara yadav – ನನ್ನ ಗೇಮ್ ಪ್ಲಾನ್ ರೆಡಿ ಮಾಡಿಕೊಳ್ಳುತ್ತಿದ್ದೇನೆ
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಸನ್ನದ್ಧಗೊಳ್ಳುತ್ತಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಅಭ್ಯಾಸದಲ್ಲಿ ನಿರತವಾಗಿದೆ.
ಅದರಲ್ಲೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರು ಆಸ್ಟ್ರೇಲಿಯಾದಲ್ಲಿ ನಡೆಸಿದ್ದ ನೆಟ್ಸ್ ಅಭ್ಯಾಸದ ಅನುಭವವನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ವಾತಾವರಣ, ಅಲ್ಲಿನ ಪಿಚ್, ಟಿ-20 ವಿಶ್ವಕಪ್ ಟೂರ್ನಿಗೆ ಮಾಡಿಕೊಳ್ಳುತ್ತಿರುವ ಪ್ಲಾನ್ ಬಗ್ಗೆಯೂ ಸೂರ್ಯ ಕುಮಾರ್ ಹೇಳಿಕೊಂಡಿದ್ದಾರೆ. ಹಾಗೇ ಈ ವಿಡಿಯೋವನ್ನು ಬಿಸಿಸಿಐ ತನ್ನ ಸಾಮಾಜಿಕ ತಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ.
32ರ ಹರೆಯದ ಸೂರ್ಯ ಕುಮಾರ್ ಯಾದವ್ ವಿಶ್ವ ಟಿ-20 ಕ್ರಿಕೆಟ್ ನ ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಸೂರ್ಯ ಕುಮಾರ್ ಈ ವರ್ಷವಂತೂ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಸೂರ್ಯ ಕುಮಾರ್ ಮೇಲೆ ಅಭಿಮಾನಿಗಳು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಮಾಡಲು ಸ್ಕೈ ಕೂಡ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದೆ. ಅಭ್ಯಾಸ ಪಂದ್ಯಕ್ಕೆ ಮುನ್ನವೇ ಆಸ್ಟ್ರೇಲಿಯಾದಲ್ಲೇ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಟೀಮ್ ಇಂಡಿಯಾ ಆಟಗಾರರು ಈಗ ನೆಟ್ಸ್ ನಲ್ಲಿ ಬಿಝಿಯಾಗಿದ್ದಾರೆ.
ಮೊದಲ ನೆಟ್ಸ್ ಅಭ್ಯಾಸ ಅದ್ಭುತವಾಗಿತ್ತು. ಇಲ್ಲಿನ ವಿಕೆಟ್ ಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನಗಿತ್ತು. ಹಾಗೇ ಇಲ್ಲಿನ ವಾತಾರವಣಕ್ಕೆ ಕೂಡ ಒಗ್ಗಿಕೊಳ್ಳಬೇಕಿದೆ ಎಂದು ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ.
ಕೆಲವು ಮಂದಿ ಹೇಳುತ್ತಿದ್ದರು ಇಲ್ಲಿನ ಮೈದಾನ ದೊಡ್ಡದಿದೆ ಅಂತ. ಹಾಗಾಗಿ ಇಲ್ಲಿನ ಬೌನ್ಸಿ ಪಿಚ್ ನಲ್ಲಿ ಯಾವ ರೀತಿ ಆಡಬೇಕು ಎಂಬುದರ ಬಗ್ಗೆ ಂ ಪ್ಲಾನ್ ಮಾಡಿಕೊಂಡು ತಯಾರಿ ಕೂಡ ನಡೆಸಬೇಕು. ಭಾರತದಂತೆ ಇಲ್ಲಿ ಲಘುವಾಗಿ ಗಾಳಿ ಬೀಸುತ್ತಿದೆ. ಹಗಲಿನ ವಾತಾವರಣ ತುಂಬಾ ಚೆನ್ನಾಗಿದೆ ಎಂದು ಸೂರ್ಯ ಕುಮಾರ್ ಹೇಳಿದ್ದಾರೆ.