ಗೆಲುವಿನ ನಾಗಲೋಟ ಮುಂದುವರೆಸಿರುವ ಭಾರತ ವನಿತೆಯರ ಕ್ರಿಕೆಟ್ ತಂಡ ಇಂದು ನಿರ್ಣಾಯಕ ಸೆಮಿಫೈನಲ್‍ನಲ್ಲಿ ಕ್ರಿಕೆಟ್ ಶಿಶು ಥೈಲೆಂಡ್ ತಂಡವನ್ನು ಎದುರಿಸಲಿದೆ. ಹರ್ಮನ್ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮೊನ್ನೆ ನಡೆದ ಲೀಗ್ ಪಂದ್ಯದಲ್ಲಿ ಥೈಲೆಂಡ್ ತಂಡವನ್ನು ಭಾರತ ವನಿತೆಯರ ತಂಡ ಕೇವಲ 37 ರನ್‍ಗಳಿಗೆ ಆಲೌಟ್ ಮಾಡಿತ್ತು.
ಥೈಲೆಂಡ್ ಅದೃಷ್ಟದ ಬಲದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಹಿಂದಿಕ್ಕಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿತು.
ನಾಯಕಿ ನರುಮೊಲ್ ಚೈವಾಯಿ ನೇತೃತ್ವದ ಥೈಲೆಂಡ್ ತಂಡ ಅದೃಷ್ಟ ಬಲದಿಂದ ಆಡುತ್ತಿಲ್ಲ ಅನ್ನೋದನ್ನು ತೋರಿಸಬೇಕಿದೆ.
ಟಿ 20 ವಿಶ್ವಕಪ್‍ಗೆ ಇನ್ನು ಅವಕಾಶವಿರುವುದರಿಂದ ಯುವ ಆಟಗಾರ್ತಿಯರಿಗೆ ಅವಕಾಶ ಕೊಡಲಾಗುತ್ತಿದೆ. ಭಾರತದ ಪಾಲಿಗೆ ಈ ಟೂರ್ನಿಯನ್ನು ಪ್ರಯೋಗಕ್ಕೆ ಬಳಸುತ್ತಿದೆ.
ನಾಯಕಿ ಹರ್ಮನ್‍ಪ್ರೀತ್ ಆರು ಲೀಗ್ ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಪಾಕಿಸ್ತಾನ ವಿರುದ್ಧ 7ನೇ ಕ್ರಮಾಂಕದಲ್ಲಿ ಆಡಿದ್ದರು.
ಫಿನೀಶರ್‍ಗಳ ಹುಡುಕಾಟದಲ್ಲಿರುವ ತಂಡ ಪವರ್ ಹಿಟ್ಟರ್ ಕಿರಣ್ ನಾವಿಗ್ರೆ ಮತ್ತು ಡಿ. ಹೇಮಲತಾ ಅವರಿಗೆ ಅವಕಾಶ ಕೊಟ್ಟು ನೋಡಿದೆ. ಏಷ್ಯಾ ಕಪ್‍ನಲ್ಲಿ ಮೂರು ಇನ್ನಿಂಗ್ಸ್‍ಗಳಿಂದ ಕೇವಲ 10 ರನ್ ಕಲೆ ಹಾಕಿದ್ದಾರೆ. ಹೇಮಲತಾ 4 ಇನ್ನಿಂಗ್ಸ್‍ಗಳಿಂದ 45 ರನ್ ಗಳಿಸಿದ್ದಾರೆ.
ಜೆಮಿಮಾ ರಾಡ್ರಿಗಸ್ ತಂಡಕ್ಕೆ ಸಕರಾತ್ಮಕ ಅಂಶವಾಗಿದ್ದು ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಕಾಪಾಡುತ್ತಿದ್ದಾರೆ. ಎರಡು ಶತಕಗಳೊಂದಿಗೆ 188 ರನ್ ಚಚ್ಚಿದ್ದಾರೆ.
ಇಂದು ನಡೆಯುವ ನಿರ್ಣಾಯಕ ಪಂದ್ಯದಲ್ಲಿ ಥೈಲೆಂಡ್ ಪರ ನನ್ನಪತ್ ಕೊಂಚರೊಯೆಂಕೈ, ನಟ್ಠಕಾನ್ ಚಾಂತಮ್ ಹಾಗೂ ನಾಯಕಿ ಚೈವಾಯಿ ಸೋಟಕ ಬ್ಯಾಟಿಂಗ್ ಮಾಡಬೇಕಿದೆ.
ಇಂದು ಪಾಕ್– ಲಂಕಾ ಸೆಮಿ ಕಾದಾಟ
ಎರಡನೆ ಸೆಮಿಫೈನಲ್‍ನಲ್ಲಿ ಶ್ರೀಲಂಕಾ ಮಹಿಳಾ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕ್ ವನಿತೆಯರು ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 1ಪಂದ್ಯವನ್ನು ಕೈಚೆಲ್ಲಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿತ್ತು. ಶ್ರೀಲಂಕಾ ತಂಡ ಟೂರ್ನಿಯಲ್ಲಿ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು ಮೂರನೆ ಸ್ಥಾನ ಪಡೆದಿತ್ತು.ಲೀಗ್‍ನಲ್ಲಿ ಲಂಕಾ ವಿರುದ್ಧ ಪಾಕ್ ವನಿತೆಯರು ಗೆದ್ದಿದ್ದರು.