ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಹರ್ಮನ್ ಪ್ರೀತ್ ಪಡೆ ಇಂದು ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇದರೊಂದಿಗೆ ಏಳನೆ ಏಷ್ಯಾಕಪ್ ಟೂರ್ನಿ ಮೇಲೆ ಕಣ್ಣಿಟ್ಟಿದೆ.
ಬಾಂಗ್ಲಾದೇಶದ ಸಿಲೆಟ್ ನಲ್ಲಿ ಇಂದು ನಡೆಯಲಿರುವ ಅಂತಿಮ ಕದನದಲ್ಲಿ ಹರ್ಮನ್ ಪ್ರೀತ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಲಂಕಾ ತಂಡವನ್ನು ಕಡೆಗಣಿಸುವಂತಿಲ್ಲ.
ಟೂರ್ನಿಯಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಹೆಚ್ಚು ಪಂದ್ಯಗಳನ್ನಾಡದೆ ಯುವ ಆಟಗಾರ್ತಿಯರಿಗೆ ಹೆಚ್ಚು ಹೆಚ್ಚು ಅವಕಾಶ ಕೊಟ್ಟು ಪ್ರಯೋಗಗಳನ್ನು ಮಾಡಿದರು.
ಯುವ ಆಟಗಾರ್ತಿಯರು ಒತ್ತಡವನ್ನು ನಿಭಾಯಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಆಲ್ರೌಂಡರ್ ದೀಪ್ತಿ ಶರ್ಮಾ 94 ರನ್ ಗಳಿಸಿ 13 ವಿಕೆಟ್ ಪಡೆದಿದ್ದಾರೆ. ಜೆಮಿಮ್ಮಾ ರಾಡ್ರಿಗಸ್ 215 ರನ್, ಶಫಾಲಿ ವರ್ಮಾ 161 ರನ್ 3 ವಿಕೆಟ್ ಪಡೆದಿದ್ದಾರೆ.
ಪಾಕಿಸ್ತಾನ ವಿರುದ್ಧ ಸೋತಿದ್ದು ತಂಡಕ್ಕೆ ಕಪ್ಪುಚುಕ್ಕೆಯಾಗಿದೆ.
ಶ್ರೀಲಂಕಾ ಪರ ಒಶಾಡಿ ರಣಾಸಿಂಘೆ ತಂಡದ ಪರ ನೂರಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಏಕೈಕ ಬ್ಯಾಟರ್. ಹರ್ಷಿತಾ ಮಾಧವಿ 201 ರನ್,ನೀಲಾಕ್ಷಿ ಡಿಸಿಲ್ವಾ124 ರನ್ ಹೊಡೆದಿದ್ದಾರೆ.
ಲಂಕಾ ಭಾರತದೆದುರು ಕಠಿಣ ಸವಾಲು ಎದುರಿಸಲಿದೆ. 2018ರ ಫೈನಲ್ನಲ್ಲಿ ಬಾಂಗ್ಲಾದೇಶ ಮಾತ್ರ ಭಾರತ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.