ಯುವ ಶೂಟರ್ ರುದ್ರಾಂಕ್ಷ ಪಾಟೀಲ್ ಐಎಸ್‍ಎಸ್‍ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದು ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
ಶುಕ್ರವಾರ ನಡೆದ ಪುರುಷರ 10ಮೀ. ಏರ್ ರೈಫಲ್ ವಿಭಾಗದಲ್ಲಿ ರುದ್ರಾಂಕ್ಶ್ ಚಿನ್ನ ಗೆದ್ದರು. ಅಭಿನವ್ ಬಿಂದ್ರಾ ನಂತರ ಈ ಸಾಧನೆ ಮಾಡಿದ ಎರಡನೆ ಭಾರತೀಯ ಶೂಟರ್ ಆಗಿದ್ದಾರೆ.
18 ವರ್ಷದ ರುದ್ರಾಂಕ್ಷ್ ಇಟಲಿಯ ಡಾನಿಲೊ ಡೆನ್ನಿಸ್ ಸೋಲ್ಲಜೊ ವಿರುದ್ಧ 17-13 ಅಂಕಗಳಿಂದ ಗೆದ್ದು ಬೀಗಿದರು.
ಒಂದು ಹಂತದಲ್ಲಿ 4-10ರಿಂದ ಹಿನ್ನಡೆ ಅನುಭವಿಸಿದ್ದ ಯುವ ಶೂಟರ್ ರುದ್ರಾಂಕ್ಷ ನಂತರ ಪ್ರಬಲ್ಯ ಮೆರೆದರು.
2024 ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತಕ್ಕೆ ಎರಡನೆ ಟಿಕೆಟ್ ಸಿಕ್ಕಂತಾಗಿದೆ.
ಒಲಿಂಪಿಕ್ ಚಾಂಪಿಯನ್ ಬಿಂದ್ರಾ 2006ರಲ್ಲಿ ನಡೆದ ಕ್ರೋವೇಷಿಯಾದಲ್ಲಿ ನಡೆದ ವಿಶ್ವಚಾಂಪಿಯನ್‍ಶಿಪ್‍ನ 10ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದು ಮಿಂಚಿದ್ದರು. ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಭೌನೀಶ್ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.