ಭಾರತದ ಮಹಿಳಾ ಕ್ರಿಕೆಟಿಗರು ಹೊಸ ದಾಖಲೆ ಬರೆದಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮೊದಲ ಬಾರಿಗೆ 300 ರನ್ಗಳ ಗಡಿ ದಾಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.
358/ 2 : 2017ರಲ್ಲಿ ಐರ್ಲೆಂಡ್ ವಿರುದ್ಧ ದಕ್ಷಿಣ ಅಫ್ರಿಕಾದ ಪೊಚೆಸ್ಟ್ರಮ್ ಪಂದ್ಯದಲ್ಲಿ ಭಾರತದ ವನಿತೆಯರು 50 ಓವರುಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 358 ರನ್ ಸಿಡಿಸಿದ್ದರು. ಇದು ಭಾರತದ ಗರಿಷ್ಠ ಮೊತ್ತವಾಗಿದೆ. ಈ ಪಂದ್ಯವನ್ನು ಭಾರತ 249 ರನ್ಗಳಿಂದ ಗೆದ್ದುಕೊಂಡಿತ್ತು.
317/8: ಹ್ಯಾಮಿಲ್ಟನ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ಈ ಸಾಧನೆ ಮಾಡಿದೆ. ಇದು ಭಾರತದ ಪಾಲಿನ 2ನೇ ಗರಿಷ್ಠ ಮೊತ್ತ. ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಭಾರತ 300 ರನ್ಗಳ ಗಡಿ ದಾಟಿದೆ.
302/3: 2018ರಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿತ್ತು. ಕಿಂಬರ್ಲಿಯಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನ 135 ರನ್ಗಳಿಸಿದ್ದು. ಭಾರತ ಈ ಪಂದ್ಯವನ್ನು 179 ರನ್ಗಳಿಂದ ಗೆದ್ದುಕೊಂಡಿತ್ತು.