ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾರತೀಯ ಆಟಗಾರ್ತಿಯರು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಭಾರತದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅತೀ ಹೆಚ್ಚು ವಿಶ್ವಕಪ್ಗಳ ದಾಖಲೆ ಬರೆದ ಮೇಲೆ ಈಗ ಬ್ಯಾಟರ್ ಹರ್ಮನ್ ಪ್ರಿತ್ ಕೌರ್ ವಿಶೇಷ ದಾಖಲೆ ಬರೆದಿದ್ದಾರೆ. ಮಹಿಳಾ ವಿಶ್ವಕಪ್ನಲ್ಲಿ ಭಾರತದ ಪರ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರ್ತಿಯರಲ್ಲಿ ಹರ್ಮನ್ ಮೊದಲಿಗರಾಗಿದ್ದಾರೆ.
03: ಹರ್ಮನ್ ಪ್ರಿತ್ ಕೌರ್:
02: ಮಿಥಾಲಿ ರಾಜ್, ಸ್ಮೃತಿ ಮಂಧಾನ
01: ತಿರುಷ್ ಕಾಮಿನಿ, ಪೂನಂ ರಾವತ್
ಹರ್ಮನ್ 3 ಶತಕಗಳನ್ನು ಸಿಡಿಸಿದ್ದರೆ, 2 ಶತಕಗಳನ್ನು ಮಿಥಾಲಿ ಮತ್ತು ಸ್ಮೃತಿ ಸಿಡಿಸಿದ್ದಾರೆ. ತಿರುಷ್ ಕಾಮಿನಿ ಮತ್ತು ಪೂನಂ ರಾವತ್ ಹೆಸರಿನಲ್ಲೂ ತಲಾ ಒಂದು ಶತಕಗಳಿವೆ. ಅಚ್ಚರಿ ಅಂದರೆ ಭಾರತೀಯ ಆಟಗಾರ್ತಿಯರು ಏಕದಿನ ವಿಶ್ವಕಪ್ ನಲ್ಲಿ ಒಟ್ಟು 9 ಶತಕಗಳನ್ನು ಸಿಡಿಸಿದ್ದಾರೆ.
ಮಹಿಳಾ ವಿಶ್ವಕಪ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಕೀರ್ತಿ ಇಂಗ್ಲೆಂಡ್ ಆಟಗಾರ್ತಿಯರ ಹೆಸರಿನಲ್ಲಿದೆ. ಜೆ.ಎ ಬ್ರಿಟ್ಟಿನಿ ಮತ್ತು ಚಾರ್ಲೆಟ್ ಎಡ್ವರ್ಡ್ಸ್ ತಲಾ 4 ಶತಕಗಳನ್ನು ಸಿಡಿಸಿದ್ದರು.
04: ಜೆ.ಎ ಬಿಟ್ಟಿನಿ (ಇಂಗ್ಲೆಂಡ್), ಚಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್)
03: ಹರ್ಮನ್ ಪ್ರಿತ್ ಕೌರ್, ಸೂಜಿ ಬೇಟ್ಸ್, ಕೆವಿನ್ ರೊಲೆಟ್, ನ್ಯಾಟ್ ಸಿವಿರ್, ಸಾರಾ ಟೇಲರ್
ಮಹಿಳಾ ವಿಶ್ವಕಪ್ನಲ್ಲಿ ಭಾರತದ ಹರ್ಮನ್ ಪ್ರಿತ್ ಜೊತೆಗೆ ನ್ಯೂಜಿಲೆಂಡ್ನ ಸೂಜಿ ಬೇಟ್ಸ್, ಆಸ್ಟ್ರೇಲಿಯಾದ ಕೆವಿನ್ ರೊಲೆಟ್, ಇಂಗ್ಲೆಂಡ್ನ ನ್ಯಾಟ್ ಸಿವಿರ್ ಮತ್ತು ಸಾರಾ ಟೇಲರ್ ತಲಾ 3 ಶತಕದ ದಾಖಲೆ ಹೊಂದಿದ್ದಾರೆ.
ವಿಶ್ವಕಪ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪೈಕಿ ಹರ್ಮನ್, ಬೇಟ್ಸ್ ಮತ್ತು ಸಿವಿರ್ ಮಾತ್ರ ಆಟ ಆಡುತ್ತಿರುವುದರಿಂದ ಈ ಮೂವರಿಗೂ ಹೊಸ ದಾಖಲೆ ಬರೆಯುವ ಅವಕಾಶವಿದೆ.