ಗುರುವಾರ ಲಖನೌ ಮತ್ತು ಚೆನ್ನೈ ನಡುವೆ ರೋಚಕ ಪಂದ್ಯ ನಡೆಯಿತು. ಲಖನೌಗೆ 211 ರನ್ಗಳ ಗುರಿಯನ್ನು ಚೆನ್ನೈ ನೀಡಿತ್ತು. ಇದನ್ನು 20 ನೇ ಓವರ್ನಲ್ಲಿ ಲಖನೌ ಮುಟ್ಟಿ ಬೀಗಿತು. ಲಖನೌಗೆ ಇದು ಮೊದಲ ಗೆಲುವಾಗಿದೆ . ಲಖನೌ ಇನ್ನಿಂಗ್ಸ್ನ 19 ನೇ ಓವರ್ನಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಲಖನೌ ಪರ ಆಡುತ್ತಿದ್ದ ಆಯುಷ್ ಬದೋನಿ ಅವರು ಶಿವಂ ದುಬೆ ಅವರ ಶಾರ್ಟ್ ಲೆಂಗ್ತ್ ಬಾಲ್ನಲ್ಲಿ ಅದ್ಭುತ ಸ್ವೀಪ್ ಶಾಟ್ನೊಂದಿಗೆ ಸಿಕ್ಸರ್ ಬಾರಿಸಿದರು. ಆದರೆ ಚೆಂಡು ಪಂದ್ಯವನ್ನು ವೀಕ್ಷಿಸುತ್ತಿದ್ದ ಮಹಿಳೆಯ ತಲೆಗೆ ಬಡಿದಿತು. ಮಹಿಳೆ ನೋವಿನಿಂದ ನರಳಲು ಪ್ರಾರಂಭಿಸಿದಳು ಮತ್ತು ಅವಳ ತಲೆಯನ್ನು ಹಿಡಿದುಕೊಂಡು ತಿಕ್ಕುತ್ತಿರುವುದು ಕಂಡುಬಂದಿತು. ಗಾಯಗೊಂಡ ಅಭಿಮಾನಿಯ ಜೊತೆಯಲ್ಲಿದ್ದ ಮತ್ತೊಬ್ಬ ಮಹಿಳೆ ಅವಳನ್ನು ತಬ್ಬಿಕೊಂಡಳು. ಸುತ್ತಲಿದ್ದ ಪ್ರೇಕ್ಷಕರೆಲ್ಲ ಅವಳ ಬಳಿಗೆ ಬಂದರು.
ಸ್ವಲ್ಪ ಸಮಯದ ನಂತರ, ಕ್ಯಾಮರಾ ಗಾಯಗೊಂಡ ಮಹಿಳೆಯ ಕಡೆಗೆ ಹೋದಾಗ, ಅವಳು ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿತು. ಅಭಿಮಾನಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಮಹಿಳೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯಾಗಿದ್ದಳು.
ಐಪಿಎಲ್ ಆರಂಭಕ್ಕೂ ಮುನ್ನ ಭಾರತ ಮತ್ತು ಶ್ರೀಲಂಕಾ ನಡುವೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆದಿತ್ತು. ಪಂದ್ಯದ ಮೊದಲ ದಿನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸರ್ ಪ್ರೇಕ್ಷಕರೊಬ್ಬರ ಮೂಗಿಗೆ ಬಡೆದು ಗಾಯವಾಗಿತ್ತು. ಅಲ್ಲದೆ ಪ್ರೇಕ್ಷಕನಿಗೆ ಹೊಲಿಗೆ ಹಾಕಬೇಕಾಯಿತು.

22 ವರ್ಷದ ಆಯುಷ್ ಐಪಿಎಲ್ನಲ್ಲಿ ಇದುವರೆಗೆ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ. ಮತ್ತು ಎರಡೂ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ನಿಂದ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಯುಷ್ ತಂಡಕ್ಕೆ ಅತೀ ಅಗತ್ಯವಿದ್ದಾಗ ರನ್ ಗಳಿಸಿದರು. ಆಯುಷ್ 9 ಎಸೆತಗಳಲ್ಲಿ 19 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 211.11 ಆಗಿತ್ತು.
ಶಿವಂ ದುಬೆಗೆ ಬಾರಿಸಿದ ಸಿಕ್ಸರ್ ಈ ವರ್ಷದ ಐಪಿಎಲ್ನ ಅತ್ಯುತ್ತಮ ಶಾಟ್ ಗಳಲ್ಲಿ ಒಂದಾಗಿದೆ. ಲಖನೌ ತಂಡ ಆಯುಷ್ನಲ್ಲಿ ಇಟ್ಟಿರುವ ಆತ್ಮವಿಶ್ವಾಸ ಅದ್ಭುತವಾಗಿದೆ. ತಂಡದ ನಾಯಕ ಕೆಎಲ್ ರಾಹುಲ್, ಆಯುಷ್ ಗೆ ಲಖನೌ ತಂಡದ ಎಬಿ ಡಿವಿಲಿಯರ್ಸ್ ಎಂದಿದ್ದಾರೆ.