Wimbledon-2022 – ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ ಸಾನಿಯಾ ಮಿರ್ಜಾ
ತನ್ನ ವೃತ್ತಿ ಬದುಕಿನ ಕೊನೆಯ ವಿಂಬಲ್ಡನ್ ಟೂರ್ನಿಯನ್ನು ಆಡುತ್ತಿರುವ ಭಾರತದ ಸಾನಿಯಾ ಮಿರ್ಜಾ ಅವರು ಆರಂಭದಲ್ಲೇ ನಿರಾಸೆ ಅನುಭವಿಸಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಚೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಅವರು ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಲೂಸಿ ಹ್ರಾಡೆಕಾ 4-6, 6-4, 6-2ರಿಂದ ಮಾಗ್ಡೆಲೆನಾ ಫ್ರೇಚ್ ಮತ್ತು ಬಿಟ್ರೋಝ್ ಹಾಡೆಡ್ ವಿರುದ್ದ ಪರಾಭವಗೊಂಡ್ರು.
2015ರ ವಿಂಬಲ್ಡನ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲಿ ಸಾನಿಜಾ ಮಿರ್ಜಾ ಅವರು, ಕ್ರೊವೇಶಿಯಾದ ಮ್ಯಾಟ್ ಪಾವಿಕ್ ಜೊತೆಗೂಡಿ ಆಡಲಿದ್ದಾರೆ. ಇವರಿಬ್ಬರು ಕಳೆದ ವರ್ಷದ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು.
ಸಾನಿಯಾ ಮಿರ್ಜಾ ಮತ್ತು ಮ್ಯಾಚ್ ಪಾವಿಕ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ನಟೆಲಾ ಝಾಲಮಿಡ್ಜೆ ಮತ್ತು ಡೆವಿಡ್ ವೆಗಾ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಭಾರತದ ಅಗ್ರಮಾನ್ಯ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಅವರು ಡಬಲ್ಸ್ ನಲ್ಲಿ ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅದೇ ರೀತಿ ಮಿಕ್ಸೆಡ್ ಡಬಲ್ಸ್ ನಲ್ಲೂ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ 2016ರ ಆಸ್ಟ್ರೇಲಿಯನ್ ಓಪನ್, 2015ರ ವಿಂಬಲ್ಡನ್ ಮತ್ತು ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಹಾಗೇ 2011ರ ಫ್ರೆಂಚ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು. Wimbledon-2022 – Sania Mirza and partner crashes out in 1st round
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲಿ 2009ರ ಆಸ್ಟ್ರೇಲಿಯನ್ ಓಪನ್, 2012ರ ಫ್ರೆಂಚ್ ಓಪನ್, 2014ರ ಯುಎಸ್ ಓಪನ್ ಗೆದ್ದಿದ್ದರು. ವಿಂಬಲ್ಡನ್ ನಲ್ಲಿ ಮೂರು ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.