MS Dhoni- ಧೋನಿಗೆ ಮೊಣಕಾಲು ನೋವು – ಚಿಕಿತ್ಸೆಯ ವೆಚ್ಚ ಬರೀ 40 ರೂಪಾಯಿ..!
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಆಗಿದ್ದರು. ಅಲ್ಲದೆ ವಿಶ್ವ ಕ್ರಿಕೆಟ್ ನಲ್ಲಿ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆಯೂ ಇದೆ.
ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಎರಡು – ಮೂರು ವರ್ಷ ಕಳೆದಿದೆ. ಸದ್ಯ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಬಹುಶಃ 2023ರ ಐಪಿಎಲ್ ಕೊನೆಯ ಐಪಿಎಲ್ ಟೂರ್ನಿಯೂ ಆಗಬಹುದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆನ್ನುಲುಬಾಗಿರುವ ಧೋನಿ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ.
ಅಂದ ಹಾಗೇ ಧೋನಿ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವಾಗ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿರುವುದು ತೀರಾ ಕಡಿಮೆ. ಫಿಟ್ ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುವ ಧೋನಿ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಿದ್ದಾರೆ. ಆಟಗಾರರು ಫಿಟ್ & ಫೈನ್ ಆಗಿರಬೇಕು ಎಂಬ ಸಿದ್ಧಾಂತವನ್ನು ಟೀಮ್ ಇಂಡಿಯಾದಲ್ಲಿ ಮೈಗೂಡಿಸಿಕೊಳ್ಳುವಂತೆ ಮಾಡಿದ್ದು ಮಹೇಂದ್ರ ಸಿಂಗ್ ಧೋನಿಯವರೇ. ಧೋನಿಯರಿಂದಲೇ ಸ್ಪೂರ್ತಿ ಪಡೆದಿರುವ ವಿರಾಟ್ ಕೊಹ್ಲಿ ಕೂಡ ಫಿಟ್ ನೆಸ್ ಕಡೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. MS Dhoni receiving treatment for knee pain by local vaidya
ಇದೀಗ ಮಹೇಂದ್ರ ಸಿಂಗ್ ಧೋನಿ ಗೆ 40ರ ಪ್ರಾಯ. ಐಪಿಎಲ್ ನಂತರ ಧೋನಿ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ.
ಆದ್ರೆ ಧೋನಿ ಸದ್ಯ ರಾಂಚಿಯಲ್ಲಿದ್ದಾರೆ. ಹಾಗೇ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೌದು, ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಎರಡು ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಧೋನಿ ಆಯುರ್ವೆದದ ಚಿಕ್ಸಿತೆ ಪಡೆದುಕೊಳ್ಳುತ್ತಿದ್ದಾರೆ.
ಅಂದ ಹಾಗೇ ಧೋನಿ ಆರ್ಯುವೇದ ಚಿಕ್ಸಿತೆ ಪಡೆದುಕೊಳ್ಳಲು ಮುಖ್ಯ ಕಾರಣ ಧೋನಿಯವರ ಅಪ್ಪ ಮತ್ತು ಅಮ್ಮ. ಇವರಿಬ್ಬರು ಸುಮಾರು ಮೂರು ನಾಲ್ಕು ತಿಂಗಳಿಂದ ಆರ್ಯುವೇದದ ಚಿಕ್ಸಿತೆ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಮಗನಿಗೆ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು. ಯಾಕಂದ್ರೆ ಈ ಆಯುರ್ವೇದ ಚಿಕಿತ್ಸೆಯಿಂದ ಧೋನಿ ಅಪ್ಪ ಅಮ್ಮ ಗುಣಮುಖರಾಗಿದ್ದರು.
ಹೀಗಾಗಿ ಧೋನಿ ಕೂಡ ಸ್ಥಳೀಯ ಆರ್ಯುವೇದ ವೈದ್ಯರನ್ನು ಭೇಟಿ ಆಗಿದ್ದಾರೆ. ಹಾಲಿನ ಜೊತೆಗೆ ಗಿಡಮೂಲಿಕೆಗಳ ಔಷಧಿಯನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ಧೋನಿ ಒಂದು ಡೋಸ್ ಔಷಧಿ ತೆಗೆದುಕೊಂಡಿದ್ದಾರೆ. ಈ ಔಷಧಿಯ ಬೆಲೆ ಕೇವಲ 40 ರೂಪಾಯಿ. ಅಷ್ಟಕ್ಕೂ ಧೋನಿಯವರ ಮೊಣಕಾಲಿನ ನೋವಿಗೆ ಚಿಕಿತ್ಸೆ ನೀಡಿರುವ ವೈದ್ಯರ ಹೆಸರು ವಂದನ್ ಸಿಂಗ್. ಇವರು ರಾಂಚಿಯಲ್ಲಿ ತುಂಬಾ ಫೇಮಸ್ ಆರ್ಯುವೇದ ವೈದ್ಯರಾಗಿದ್ದಾರೆ.
ಒಟ್ಟಿನಲ್ಲಿ ಧೋನಿ ಕೂಡ ಆಯುರ್ವೇದ ಚಿಕ್ಸಿತೆಯತ್ತ ಗಮನ ಹರಿಸಿದ್ದಾರೆ. ಇಂಗ್ಲೀಷ್ ಔಷಧಿಗಿಂತ ನಾಟಿ ಔಷಧಿ ಒಳ್ಳೆಯದ್ದು. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಧೋನಿ ಕೇವಲ 40 ರೂಪಾಯಿಯಲ್ಲಿ ತನ್ನ ಮೊಣಕಾಲಿನ ನೋವನ್ನು ವಾಸಿ ಮಾಡಿಕೊಳ್ಳುತ್ತಿದ್ದಾರೆ.