ಐಪಿಎಲ್ ಆಟಗಾರರ ಹರಾಜಿನ ಟ್ರೆಂಡ್ ಬದಲಾಗಿದೆ. ಮಲ್ಟಿ ಟ್ಯಾಲೆಂಟೆಡ್ ಆಟಗಾರರಿದ್ದರೆ ಅವರಿಗೆ ಸಖತ್ ದುಡ್ಡು ಸಿಗೋದು ಗ್ಯಾರೆಂಟಿ. ಪಕ್ಕಾ ಬೌಲರ್ ಅಥವಾ ಪ್ಯೂರ್ ಬ್ಯಾಟ್ಸ್ಮನ್ ಆಗಿದ್ದರೂ ಆಲ್ರೌಂಡರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಮುಂದೆ ಮಂಕಾಗುವುದು ನಿಜ
ಐಪಿಎಲ್ ಹರಾಜಿನಲ್ಲಿ 22 ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ಗಳು ಒಟ್ಟು ಸೇರಿ 68 ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ. ವಿಕೆಟ್ ಕೀಪರ್ಗಳು ಪಡೆದ ಸರಾಸರಿ ಮೊತ್ತು 3 ಕೋಟಿ 11 ಲಕ್ಷ ರೂಪಾಯಿ. ಇಬ್ಬರು ವಿಕೆಟ್ ಕೀಪರ್ಗಳು ಮಿಲಿಯನೇರ್ಗಳಾಗಿದ್ದಾರೆ.
ಹರಾಜಿನಲ್ಲಿ ಖರೀದಿಸಲಾದ ಪಕ್ಕಾ ಬ್ಯಾಟ್ಸ್ಮನ್ಗಳ ಸಂಖ್ಯೆ 36. ಇವರಿಗಾಗಿ 10 ಫ್ರಾಂಚೈಸಿಗಳು ಖರ್ಚು ಮಾಡಿದ್ದು 94 ಕೋಟಿ ರೂಪಾಯಿ . ಬ್ಯಾಟ್ಸ್ಮನ್ಗಳಿಗಾಗಿ ಫ್ರಾಂಚೈಸಿಗಳು ಖರ್ಚು ಮಾಡಿದ ಮೊತ್ತ 2 ಕೋಟಿ 62 ಲಕ್ಷ ರೂಪಾಯಿ. 5 ಬ್ಯಾಟ್ಸ್ಮನ್ಗಳು ಈ ಐಪಿಎಲ್ನಿಂದ ಮಿಲಿಯನೇರ್ಗಳಾಗಿದ್ದಾರೆ.
69 ಪ್ಯೂರ್ ಬೌಲರ್ಗಳನ್ನು ಖರೀದಿ ಮಾಡಲಾಗಿದೆ. ಇವರಿಗಾಗಿ ಕೊಟ್ಟ ಒಟ್ಟು ಮೊತ್ತ 176 ಕೋಟಿ ರೂಪಾಯಿ. ಬೌಲರ್ಗಳಿಗೆ ಸಿಕ್ಕಿದ ಸರಾಸರಿ ಮೊತ್ತ 2 ಕೋಟಿ 55 ಲಕ್ಷ ರೂಪಾಯಿ. 9 ಬೌಲರ್ಗಳು ಮಿಲಿಯನೇರ್ಗಳಾಗಿದ್ದಾರೆ.
ಹರಾಜಿನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ಗಳಿಸಿದ್ದು ಆಲ್ರೌಂಡರ್ಗಳು. 10 ಫ್ರಾಂಚೈಸಿಗಳು 213 ಆಲ್ರೌಂಡರ್ಗಳನ್ನು ಖರೀದಿ ಮಾಡಿದೆ. ಇವರಿಗಾಗಿ ವ್ಯಯಿಸಿದ ಮೊತ್ತ176 ಕೋಟಿ ರೂಪಾಯಿ. ಪ್ರತಿಯೊಬ್ಬ ಬೌಲರ್ ಆಲ್ರೌಂಡರ್ ಪಡೆದ ಸರಾಸರಿ ಮೊತ್ತ 2 ಕೋಟಿ 77 ಲಕ್ಷ ರೂಪಾಯಿ .
ಎಲ್ಲಾ ಅಂಕಿ ಅಂಶಗಳನ್ನು ಗಮಿಸಿದಾಗ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಒಂದೇ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿದ್ದರೆ ಸ್ಥಾನ ಕಷ್ಟ ಅನ್ನುವುದು ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಟ್ರೆಂಡ್ ಮುಂದುವರೆಯುವ ಸೂಚನೆ ಸಿಕ್ಕಿದೆ.