T20 ಆಟದಲ್ಲಿ ಯುವಕರಿಗೆ ಹೆಚ್ಚು ಪ್ರಾಮುಖ್ಯತೆ. ಈಗ ಈ ಮಾತು ಫ್ರಾಂಚೈಸಿ ಮಾಲೀಕರಿಗೂ ಅನ್ವಯವಾಗುತ್ತದೆ. ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರ ಮಕ್ಕಳು ನಿರ್ಧಾರಗಳನ್ನು ಕೈಗೊಂಡಿದ್ದು ಅಚ್ಚರಿ ಹುಟ್ಟಿಸಿತ್ತು.
ಆಕಾಶ್ ಅಂಬಾನಿ: 30 ವರ್ಷದ ಆಕಾಶ್ ಅಂಬಾನಿ ಬ್ರೌನ್ ಯೂನಿವರ್ಸಿಟಿಯ ಪದವೀಧರ. ರಿಲಯನ್ಸ್ ಇಂಡಸ್ಟ್ರೀಸ್ನಲ್ಲೂ ಕೈಚಳಕ ತೋರಿರುವ ಆಕಾಶ್ ಈ ಬಾರಿ ಅಮ್ಮ ನೀತಾ ಜೊತೆ ಮುಂಬೈ ಇಂಡಿಯನ್ಸ್ ಪ್ಯಾನಲ್ನಲ್ಲಿ ಕಾಣಿಸಿಕೊಂಡಿದ್ದರು. ಜಹೀರ್ ಖಾನ್ ಮತ್ತು ಇತರೆ ಅನುಭವಿಗಳು ಜೊತೆಗಿದ್ದರೂ ಆಕಾಶ್ ನಿರ್ಧಾರ ಪ್ರಮುಖವಾಗಿ ಕಾಣುತ್ತಿತ್ತು.
ಕಾವ್ಯ ಮಾರನ್: ಸನ್ರೈಸರ್ಸ್ ಹೈದ್ರಾಬಾದ್ ಪ್ಯಾನಲ್ನಲ್ಲಿದ್ದ ಕಾವ್ಯಾ ಟಾಮ್ ಮೂಡಿ ಮತ್ತು ಮುತ್ತಯ್ಯ ಮುರಳೀಧರನ್ ಜೊತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗಾಗಲೇ ಸನ್ ಟಿವಿಯ ಕೆಲ ಆಡಳಿತ ವಿಷಯಗಳಲ್ಲಿ ತೊಡಗಿಕೊಂಡಿರುವ ಕಾವ್ಯಾ ಮುಂದಿನ ಓನರ್ ಅನ್ನುವುದನ್ನು ಪದೇ ಪದೇ ನಿರೂಪಿಸುತ್ತಿದ್ದರು.
ಆರ್ಯನ್, ಸುಹಾನ ಮತ್ತು ಜಾಹ್ನವಿ ಮೆಹ್ತಾ: ಕೊಲ್ಕತ್ತಾ ನೈಟ್ ರೈಡರ್ಸ್ ಪ್ಯಾನಲ್ನಲ್ಲಿ ಈ ಮೂವರ ನಿರ್ಧಾರಗಳು ಪ್ರಮುಖವಾಗಿದ್ದವು. ಶಾರೂಖ್ ಖಾನ್ ಪುತ್ರ ಆರ್ಯನ್, ಪುತ್ರಿ ಸುಹಾನ ಮತ್ತು ಜೂಹಿ ಚಾವ್ಲಾ ಪುತ್ರಿ ಜಾಹ್ನವಿ ಮೆಹ್ತಾ ನಿರ್ಧಾರಗಳು ಅಚ್ಚರಿಗೆ ಕಾರಣವಾಗಿದ್ದವು.
ಪಾರ್ಥ್ ಜಿಂದಾಲ್: ದೆಹಲಿ ಕ್ಯಾಪಿಟಲ್ಸ್ನ ಮಾಲೀಕರಾಗಿರುವ ಜಿಂದಾಲ್ ಪುತ್ರ ಪಾರ್ಥ್ ಈ ಬಾರಿಯ ಐಪಿಎಲ್ ಮೆಗಾ ಹರಾಜು ಟೇಬಲ್ನಲ್ಲಿ ಕಾಣಿಸಿಕೊಂಡಿದ್ದರು. ಹಲವು ರಿಸ್ಕ್ ಇದ್ದ ನಿರ್ಧಾರಗಳನ್ನು ಪಾಥ್ ತೆಗೆದುಕೊಂಡಿದ್ದು ಗಮನ ಸೆಳೆದಿತ್ತು.