ಆರಂಭಿಕ ಬ್ಯಾಟ್ಸಮನ್ ಝಾಕ್ ಕ್ರಾಲಿ(117*) ಶತಕ ಹಾಗೂ ನಾಯಕ ಜೋ ರೂಟ್(84*) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್ ಹಿನ್ನಡೆ ನಡುವೆಯೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಉತ್ತಮ ಕಮ್ಬ್ಯಾಕ್ ಮಾಡಿದೆ.
ಆಂಟಿಗುವಾದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 375 ರನ್ಗಳಿಗೆ ಕಟ್ಟಿಹಾಕಿತು. ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ನಷ್ಟಕ್ಕೆ 217 ರನ್ಗಳಿಸಿದ್ದು, 153 ರನ್ಗಳ ಮುನ್ನಡೆ ಸಾಧಿಸಿದೆ. ಪಂದ್ಯ ಬಹುತೇಕ ಡ್ರಾನತ್ತ ಮುಖ ಮಾಡಿದ್ದರು, 5ನೇ ಹಾಗೂ ಕೊನೆಯ ದಿನದಾಟ ಫಲಿತಾಂಶವನ್ನು ನಿರ್ಧರಿಸಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ 64 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಅಲೆಕ್ಸ್ ಲೀಸ್(6) ಬಹುಬೇಗನೆ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ಝಾಕ್ ಕ್ರಾಲಿ(117*) ಶತಕ ಹಾಗೂ ನಾಯಕ ಜೋ ರೂಟ್(84*) ಜವಾಬ್ದಾರಿಯ ಆಟವಾಡಿದರು. ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ವಿಂಡೀಸ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ, 2ನೇ ವಿಕೆಟ್ಗೆ ಮುರಿಯದ 193 ರನ್ಗಳ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಝಾಕ್ ಕ್ರಾಲಿ(117*) ಶತಕ ಸಿಡಿಸಿ ಮಿಂಚಿದರೆ. ಇವರಿಗೆ ನಾಯಕ ಜೋ ರೂಟ್(84*) ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜವಾಬ್ದಾರಿಯ ಆಟದ ನೆರವಿನಿಂದ ಕಮ್ಬ್ಯಾಕ್ ಮಾಡಿರುವ ಇಂಗ್ಲೆಂಡ್, 153 ರನ್ಗಳ ಮುನ್ನಡೆಯೊಂದಿಗೆ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್ 1 ವಿಕೆಟ್ ಪಡೆದರು.
ಇದಕ್ಕೂ 3ನೇ ದಿನದ ಮೊತ್ತ 375/9 ರನ್ಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್, ಕೇವಲ 2 ರನ್ಗಳಿಸಿ 4ನೇ ದಿನದ ಮೊದಲ ಓವರ್ನಲ್ಲೇ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರೆಗ್ ಓವರ್ಟನ್, ಜ್ಯಾಕ್ ಲೀಚ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರೆ. ಕ್ರಿಸ್ ವೋಕ್ಸ್ ಹಾಗೂ ಡಾನ್ ಲಾರೆನ್ಸ್ 1 ವಿಕೆಟ್ ಪಡೆದರು.