ICC Women’s ODI World Cup 2022- ಶತಕದ ಸಂಭ್ರಮದಲ್ಲಿ ತೇಲಾಡಿದ ಸ್ಮತಿ ಮಂದಾನ – ಹರ್ಮನ್ ಪ್ರೀತ್..!

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತದ ಸ್ಮತಿ ಮಂದಾನ ಅವರು ಶತಕ ದಾಖಲಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮುಂದಾನ ಅವರು 108 ಎಸೆತಗಳಲ್ಲಿ ಶತಕದ ಸಂಭ್ರಮದಲ್ಲಿ ತೇಲಾಡಿದ್ರು.
ಈ ಮೂಲಕ ಸ್ಮøತಿ ಮಂದಾನ ಅವರು ಏಕದಿನ ಕ್ರಿಕೆಟ್ ನಲ್ಲಿ ತನ್ನ ಶತಕಗಳ ಸಂಖ್ಯೆಯನ್ನು 5ಕ್ಕೇರಿಸಿಕೊಂಡ್ರು. ಅಲ್ಲದೆ ವಿಶ್ವಕಪ್ ಟೂರ್ನಿಗಳಲ್ಲಿ ಸ್ಮತಿ ಮಂದಾನ ಅವರು ಎರಡನೇ ಶತಕವನ್ನು ದಾಖಲಿಸಿದ್ರು. 2017ರ ವಿಶ್ವಕಪ್ ನಲ್ಲೂ ವೆಸ್ಟ್ ಇಂಡೀಸ್ ವಿರುದ್ಧವೇ ಸ್ಮತಿ ಮಂದಾನ ಅವರು ಶತಕ ಸಿಡಿಸಿದ್ದರು. ICC Women’s ODI World Cup 2022-Smriti Mandhana Harmanpreet centuries
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮಹಿಳಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. 78 ರನ್ ಗಳಿಸುವಷ್ಟರಲ್ಲಿ ಮೂವರು ಆಟಗಾರ್ತಿಯರು ಪೆವಿಲಿಯನ್ ಸೇರಿಕೊಂಡಿದ್ದರು.
ಬಳಿಕ ಸ್ಮತಿ ಮಂದಾನ ಅವರು ಹರ್ಮನ್ ಪ್ರೀತ್ ಕೌರ್ ಜೊತೆ ಸೇರಿಕೊಂಡು ತಂಡಕ್ಕೆ ಚೇತರಿಕೆ ನೀಡಿದ್ರು. ಅಲ್ಲದೆ 4ನೇ ವಿಕೆಟ್ 184 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದ್ರು.
ಅಂತಿಮವಾಗಿ ಆರಂಭಿಕ ಆಟಗಾರ್ತಿ ಸ್ಮತಿ ಮಂದಾನ ಅವರು 119 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಾಯದಿಂದ 123 ರನ್ ದಾಖಲಿಸಿದ್ರು. IICC Women’s ODI World Cup 2022-Smriti Mandhana smashes 108-ball ton vs West Indies
ಇನ್ನೊಂದೆಡೆ ಹರ್ಮನ್ ಪ್ರೀತ್ ಕೌರ್ ಕೂಡ ಶತಕದ ಸಂಭ್ರಮದಲ್ಲಿ ತೇಲಾಡಿದ್ರು. ಹರ್ಮನ್ ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡ್ರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 107 ರನ್ ಸಿಡಿಸಿದ್ರು.
ಅಂತಿಮವಾಗಿ ಭಾರತ ಮಹಿಳಾ ತಂಡ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 317 ರನ್ ದಾಖಲಿಸಿದೆ.