Sachin tendulkar – ವಿದಾಯದ ವೇಳೆ ಸಚಿನ್ ಗೆ ವಿರಾಟ್ ಕೊಹ್ಲಿ ಕೊಟ್ಟ ಆ ಅಮೂಲ್ಯ ಗಿಫ್ಟ್ ಏನು ?
ನವೆಂಬರ್ 16, 2013.. ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಲ್ಲಿ ಶೂನ್ಯ ಭಾವ ಆವರಿಸಿದ್ದ ದಿನ. ಬಹುಶಃ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಲ್ಲಿ ಅಂತಹ ಒಂದು ಭಾವನಾತ್ಮಕ ವಾತಾವರಣ ಈ ಹಿಂದೆ ನಡೆದಿರಲಿಲ್ಲ. ಮುಂದೆ ನಡೆಯುವುದು ಅನುಮಾನ. ಯಾಕಂದ್ರೆ ಅಂದು ಟೀಮ್ ಇಂಡಿಯಾದ ಗರ್ಭಗುಡಿಯಿಂದ ಕ್ರಿಕೆಟ್ ದೇವ್ರು ಹೊರಬಂದ ದಿನ. ಆ ದಿನ ಟೀಮ್ ಇಂಡಿಯಾ ಆಟಗಾರರ ಮುಖದಲ್ಲಿ ಬೇಸರ, ನೋವು, ದುಃಖ ಎಲ್ಲವೂ ಆವರಿಸಿಕೊಂಡಿತ್ತು. ಕ್ರಿಕೆಟ್ ಜಗತ್ತಿಗೂ ಸಚಿನ್ ತೆಂಡುಲ್ಕರ್ ಅವರ ವಿದಾಯದ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸಚಿನ್ ಅಭಿಮಾನಿಗಳು ಅವತ್ತು ಕಣ್ಣೀರು ಸುರಿಸಿದ್ದರು. 23 ವರ್ಷಗಳ ಕಾಲ ಸಚಿನ್… ಸಚಿನ್.. ಸಚಿನ್.. ಅಂತ ಮಂತ್ರ ಘೋಷದಂತೆ ಮೈದಾನದಲ್ಲಿ ಮೊ¼ಗುತ್ತಿದ್ದ ಅಭಿಮಾನಿಗಳ ಅಭಿಮಾನ ಯಾವ ಕ್ರಿಕೆಟಿಗನಿಗೂ ಸಿಗುವುದಿಲ್ಲ. ಅದಕ್ಕೆ ಸಚಿನ್ ಕ್ರಿಕೆಟ್ ಜಗತ್ತಿನ ದೇವ್ರರಾಗಿದ್ದು.
ಹೌದು, ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ 9 ವರ್ಷಗಳಾಗುತ್ತಿದೆ. ಆದ್ರೂ ಸಚಿನ್ ಆಡಿದ ರೀತಿ, ದಾಖಲಿಸಿದ ದಾಖಲೆಗಳು ಎಲ್ಲವನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಸಚಿನ್ ವಿದಾಯ ಹೇಳಿದ ನಂತರ ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿರುವ ವಿಚಾರ. ಸಚಿನ್ ಬಯೋಗ್ರಫಿ ಮೂಲಕ ಸಚಿನ್ ಕ್ರಿಕೆಟಿನಾಗಿ ರೂಪುಗೊಂಡಿರುವ ಚಿತ್ರವೂ ಬೆಳ್ಳಿ ಪರದೆಯ ಮೇಲೆ ಮೂಡಿ ಬಂದಿದೆ. ಕುಟುಂಬದ ಜೊತೆ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ಸಚಿನ್, ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಜೊತೆಗೆ ವೀಕ್ಷಕ ವಿವರಣೆ ಕೂಡ ಮಾಡುತ್ತಿದ್ದಾರೆ.
ಈ ನಡುವೆ ಸಂದರ್ಶನಗಳಲ್ಲಿ ತಮ್ಮ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಘಟನೆಗಳನ್ನು ಕೂಡ ಹೇಳಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಚಿನ್ ತೆಂಡುಲ್ಕರ್ ಅವರು ವಿರಾಟ್ ಕೊಹ್ಲಿಯ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. Why Sachin Tendulkar returned Virat Kohli’s ‘retirement gift
ಹೌದು, ಸಚಿನ್ ತೆಂಡುಲ್ಕರ್ ಅವರು ನಿವೃತ್ತಿಯಾದ ವಿರಾಟ್ ಕೊಹ್ಲಿ ಅಮೂಲ್ಯವಾದ ಉಡುಗೊರೆಯನ್ನು ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ನೀಡಿರುವ ಉಡುಗೊರೆ ಅಂತಿಂಥದ್ದಲ್ಲ. ವಿರಾಟ್ ತಂದೆ ಪ್ರೇಮ್ ಕೊಹ್ಲಿ ಅವರು ವಿರಾಟ್ ಗೆ ಪವಿತ್ರ ದಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆ ಉಡುಗೊರೆಯನ್ನು ವಿರಾಟ್ ತಂದೆಯ ನೆನಪಿಗೆ ತನ್ನಲ್ಲೇ ಇಟ್ಟುಕೊಂಡಿದ್ದರು. ಆದ್ರೆ ಸಚಿನ್ ವಿದಾಯ ಹೇಳಿದಾಗ ಆ ಪವಿತ್ರ ದಾರವನ್ನು ವಿರಾಟ್ ಉಡುಗೊರೆಯಾಗಿ ಕೊಟ್ಟಿದ್ದರು. ಆ ಕ್ಷಣದಲ್ಲಿ ಸಚಿನ್ ವಿರಾಟ್ ನೀಡಿರುವ ಉಡುಗೊರೆಯನ್ನು ಸ್ವೀಕರಿಸಿದ್ರು. ಸ್ವಲ್ಪ ಸಮಯದ ನಂತರ ಆ ಉಡುಗೊರೆಯನ್ನು ವಿರಾಟ್ ಗೆ ವಾಪಸ್ ಹಿಂತಿರುಗಿಸಿದ್ದರು.
ಅಷ್ಟಕ್ಕೂ ವಿರಾಟ್ ಆ ಉಡುಗೊರೆಯನ್ನು ನೀಡಲು ಪ್ರಮುಖ ಕಾರಣ ಸಚಿನ್ ಮೇಲಿನ ಅಭಿಮಾನ. ವಿರಾಟ್ ಸಚಿನ್ ಆಟವನ್ನು ನೋಡುತ್ತಾ ಬೆಳೆದವರು. ಮುಂದೊಂದು ದಿನ ಸಚಿನ್ ಜೊತೆ ಆಡುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಸುಮಾರು ಏಳೆಂಟು ವರ್ಷಗಳ ಕಾಲ ಸಚಿನ್ ಜೊತೆಯಾಗಿ ಆಡಿದ್ದವರು. ಹೀಗಾಗಿ ಸಚಿನ್ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ವಿರಾಟ್ ಕೊಹ್ಲಿ ತನ್ನ ತಂದೆ ನೀಡಿದ್ದ ಪವಿತ್ರ ದಾರವನ್ನು ನೀಡಿದ್ದರು.
ಈ ಘಟನೆಯನ್ನು ಸಚಿನ್ ನೆನಪು ಮಾಡಿಕೊಂಡಿದ್ದು ಹೀಗೆ..
ಅದು ನನ್ನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯವಾಗಿತ್ತು. ಅಂದು ನಾನು ತುಂಬಾ ಭಾವನಾತ್ಮಕವಾಗಿದ್ದೆ. ನೋವು, ಬೇಸರ, ಕಣ್ಣೀರು ಎಲ್ಲವೂ ನನ್ನನ್ನು ಆವರಿಸಿಕೊಂಡಿತ್ತು. ನಾನು ಡ್ರೆಸಿಂಗ್ ರೂಮ್ ನ ಒಂದು ಮೂಲೆಯಲ್ಲಿ ಒಬ್ಬನೇ ಕೂತಿದ್ದೆ. ತಲೆಗೆ ಟವಲ್ ಹಾಕೊಂಡಿದ್ದೆ. ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಆಗ ವಿರಾಟ್ ನನ್ನ ಬಳಿಗೆ ಬಂದು ಅವರ ತಂದೆ ನೀಡಿದ್ದ ಪವಿತ್ರ ದಾರವನ್ನು ನನಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಚಿನ್ ಹೇಳಿಕೊಂಡಿದ್ದಾರೆ.
ನಾನು ವಿರಾಟ್ ನೀಡಿದ್ದ ಉಡುಗೊರೆಯನ್ನು ಸ್ವಲ್ಪ ಸಮಯ ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಆದಾದ ಬಳಿಕ ನಾನು ವಾಪಸ್ ಕೊಟ್ಟೆ. ಅಲ್ಲದೆ ವಿರಾಟ್ ಗೆ ಹೇಳಿದ್ದೆ.. ಇದು ನಿನ್ನ ಸ್ವತ್ತು.. ಇದು ನಿನ್ನ ಬಳಿಯೇ ಇರಬೇಕು. ಇದನ್ನು ನೀನು ನಿನ್ನ ಉಸಿರು ಇರುವ ತನಕ ನೀನೇ ಇಟ್ಟುಕೊಳ್ಳಬೇಕು. ಈ ಅಮೂಲ್ಯ ವಸ್ತುವನ್ನು ನೀನು ಬೇರೆ ಯಾರಿಗೂ ಕೊಡಬಾರದು ಎಂದು ವಿರಾಟ್ ಗೆ ನಾನು ಹೇಳಿದ್ದೆ ಅಂತ ಸಚಿನ್ ತೆಂಡುಲ್ಕರ್ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.