ಮೊದಲ 4 ಪಂದ್ಯಗಳು 2-2ರಲ್ಲಿ ಸಮಬಲಗೊಂಡಿದ್ದವು. ಸರಣಿ ನಿರ್ಣಾಯಕ 5ನೇ ಪಂದ್ಯ ಮಹತ್ವ ಪಡೆದಿತ್ತು. ಆದರೆ ವೆಸ್ಟ್ಇಂಡೀಸ್ ಮಾಜಿ ನಾಯಕ ಜೇಸನ್ ಹೋಲ್ಡರ್ (Jason Holder) ಮಾಡಿದ ಮಲಿಂಗಾ (Lasith Malinga) ಮ್ಯಾಜಿಕ್ ಮೂಲಕ 17ರನ್ಗಳಿಂದ ಪಂದ್ಯ ಗೆಲ್ಲುವ ಜೊತೆಗೆ ಸರಣಿಯನ್ನೂ ಗೆದ್ದಿದೆ.
ಬ್ರೆಂಡನ್ ಕಿಂಗ್ (Brendon King) ಮತ್ತು ಕೈಲ್ ಮೇಯರ್ಸ್ (Kyle Mayers) ವೆಸ್ಟ್ಇಂಡೀಸ್ಗೆ (WestIndies) 59 ರನ್ಗಳ ಬಿರುಸಿನ ಆರಂಭ ತಂದುಕೊಟ್ಟರು. ಮೇಯರ್ಸ್ 19 ಎಸೆತಗಳಲ್ಲಿ 31 ರನ್ಗಳಿಸಿ ನಿರ್ಗಮಿಸಿದರು, ರೊಮರಿಯೊ ಶೆಫರ್ಡ್ ಮತ್ತು 34 ರನ್ಗಳಿಸಿದ್ದ ಬ್ರೆಂಡನ್ ಕಿಂಗ್ ಬೆನ್ನುಬೆನ್ನಿಗೆ ಔಟಾದರು. ನಿಕೊಲಸ್ ಪೂರನ್ 21 ರನ್ಗಳಸಿ ನಿರ್ಗಮಿಸಿದರು.
ಸ್ಲಾಗ್ ಓವರುಗಳಲ್ಲಿ ಕೈರಾನ್ ಪೊಲ್ಲಾರ್ಡ್ ಮತ್ತು ರೊವ್ಮನ್ ಪೊವೆಲ್ ಬಿರುಗಾಳಿ ಆಟ ಆಡಿದರು. ಪೊಲಾರ್ಡ್ ಕೇವಲ 25 ಎಸೆತಗಳಲ್ಲಿ 41 ರನ್ ಸಿಡಿಸಿದರೆ, ಪೊವೆಲ್ 17 ಎಸೆತಗಳಲ್ಲಿ 35 ರನ್ ಸಿಡಿಸಿದರು. 20 ಓವರುಗಳಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಕಳೆದುಕೊಂಡು 179 ರನ್ಗಳಿಸಿತು.
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ (England) ಆರಂಭದಲ್ಲೇ ಮುಗ್ಗರಿಸಿತು. ಜೇಸನ್ ರಾಯ್ (8), ಟಾಮ್ ಬಾಂಟನ್ (16) ಮೊಯಿನ್ ಅಲಿ (14) ಮತ್ತು ಲಿಯಂ ಲಿವಿಂಗ್ ಸ್ಟೋನ್ (6) ಬೇಗನೆ ಔಟಾದರು. ಆದರೆ ಜೇಮ್ಸ್ ವಿನ್ಸ್ 35 ಎಸೆತಗಳಲ್ಲಿ 55 ರನ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ 28 ಎಸೆತಗಳಲ್ಲಿ 41 ರನ್ಗಳಿಸಿ ಚೇಸಿಂಗ್ಗೆ ಜೀವ ತುಂಬಿದರು.
ಕೊನೆಯ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 18 ರನ್ ಬೇಕಿತ್ತು. ಆದರೆ ಜೇಸನ್ ಹೋಲ್ಡನ್ ಮಲಿಂಗಾ ಮ್ಯಾಜಿಕ್ ಮಾಡಿದರು. 20ನೇ ಓವರ್ನ 2, 3, 4 ಮತ್ತು 5ನೇ ಎಸೆತಗಳಲ್ಲಿ ವಿಕೆಟ್ ಪಡೆದು ಹ್ಯಾಟ್ರಿಕ್ ಸೇರಿದಂತೆ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ 162 ರನ್ಗೆ ಆಲೌಟ್ ಆಗಿ 17 ರನ್ಗಳಿಂದ ಪಂದ್ಯ ಸೋತರೆ, 3-2ರಿಂದ ಟಿ20 ಸರಣಿ ಸೋತಿತು.