West Indies team ಗಾಂಧಿಯ ನಾಡಲ್ಲಿ ಕೆರೆಬಿಯನ್ ದೈತ್ಯರು..! ಮೋದಿ ಮೈದಾನದಲ್ಲಿ ಏಕದಿನ ಸರಣಿ..!
ಟೀಮ್ ಇಂಡಿಯಾ ವಿರುದ್ದದ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಯನ್ನು ಆಡಲು ವೆಸ್ಟ್ ಇಂಡೀಸ್ ತಂಡ ಅಹಮದಾಬಾದ್ ಗೆ ಆಗಮಿಸಿದೆ.
ಈಗಾಗಲೇ ವೆಸ್ಟ್ ಇಂಡೀಸ್ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಐದು ಟಿ-20 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 3-2ರಿಂದ ಇಂಗ್ಲೆಂಡ್ ತಂಡವನ್ನು ಮನಿಸಿದೆ.
ಕಿರಾನ್ ಪೊಲಾರ್ಡ್ ಸಾರಥ್ಯದ ವೆಸ್ಟ್ ಇಂಡೀಸ್ ತಂಡ ಬಲಿಷ್ಠವಾಗಿಯೇ ಇದೆ. ಅನುಭವಿ ಮತ್ತು ಯುವ ಆಟಗಾರರನ್ನೊಳಗೊಂಡ ತಂಡ ಭಾರತಕ್ಕೆ ತವರಿನಲ್ಲೇ ಜಿದ್ದಾಜಿದ್ದಿನ ಫೈಟ್ ನೀಡುವ ವಿಶ್ವಾಸದಲ್ಲಿದೆ.
West Indies team touch down in Ahmedabad
ಈಗಾಗಲೇ ಕಿರಾನ್ ಪೊಲಾರ್ಡ್ ಮತ್ತು ವೆಸ್ಟ್ ಇಂಡೀಸ್ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎಂಬ ಟೀಕೆ – ಆರೋಪಗಳು ಕೇಳಿಬಂದಿದ್ದವು. ಆದ್ರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ತಂಡ ಒಗ್ಗಟ್ಟಿನಿಂದ ಕೂಡಿದೆ. ಪೊಲಾರ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯು ಸ್ಪಷ್ಟಪಡಿಸಿದೆ.
ಫೆಬ್ರವರಿ 6ರಿಂದ ಅಹಮದಾಬಾದ್ ನಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ. ಫೆಬ್ರವರಿ 9 ಮತ್ತು 11Àಂದು ಎರಡು ಮತ್ತು ಮೂರನೇ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಸರಣಿಯನ್ನು ಗುಜರಾತ್ ಕ್ರಿಕೆಟ್ ಸಂಸ್ಥೆಯು ಆಯೋಜನೆ ಮಾಡಲಿದೆ. ಈ ಪಂದ್ಯಕ್ಕೆ ಮೈದಾ£ನದೊಳಗೆ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಿಲ್ಲ.
ಇನ್ನು ಟಿ-20 ಸರಣಿಗೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ಆಯೋಜನೆ ಮಾಡಲಿದೆ. ಫೆಬ್ರವರಿ 16, 18 ಮತ್ತು ಫೆಬ್ರವರಿ 20 ರಂದು ನಡೆಯಲಿದೆ. ಆದ್ರೆ ಈ ಪಂದ್ಯವನ್ನು ನೋಡಲು ಶೇ.75ರಷ್ಟು ಪ್ರೇಕ್ಷಕರಿಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ .