FIFA World Cup qualifying matches- ಬ್ರೆಜಿಲ್ – ಅರ್ಜೆಂಟಿನಾಗೆ ಸುಲಭ ಜಯ..!
2022ರ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟಿನಾ ತಂಡಗಳು ಸುಲಭವಾಗಿ ಜಯ ಸಾಧಿಸಿವೆ.
ಬ್ರೆಜಿಲ್ ತಂಡ 4-0 ಗೋಲುಗಳಿಂದ ಪೆರುಗ್ವೆ ತಂಡವನ್ನು ಪರಾಭವಗೊಳಿಸಿತ್ತು.
ಪಂದ್ಯ ಮುಗಿಯಲು ಇನ್ನೇನೂ 4 ನಿಮಿಷಗಳು ಬಾಕಿ ಇರುವಾಗ ಬ್ರೆಜಿಲ್ ತಂಡ ಸತತ ಎರಡು ಗೋಲು ದಾಖಲಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತ್ತು. ರಿಯಲ್ ಮ್ಯಾಡ್ರಿಡ್ ನ ಸ್ಟ್ರೈಕರ್ ರೊಡ್ರಾಗೊ ಚೊಚ್ಚಲ ಅಂತಾರಾಷ್ಟ್ರೀಯ ಗೋಲು ದಾಖಲಿಸಿದ್ರು.
ಈ ಸೋಲಿನೊಂದಿಗೆ ಪೆರುಗ್ವೆ ತಂಡ ಕತಾರ್ ವಿಸ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶದಿಂದ ವಂಚಿತವಾಯ್ತು. ಡಿಸೆಂಬರ್ ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
FIFA World Cup qualifying matches- Brazil cruise past Paraguay; Argentina down Colombia
ದಕ್ಷಿಣ ಅಮೆರಿಕಾ ವಲಯದ ಫಿಫಾ ವಿಶ್ವ ಕಪ್ ಅರ್ಹತಾ ಸುತ್ತಿನ ಗುಂಪಿನಲ್ಲಿ ಬ್ರೆಜಿಲ್ ತಂಡ ಅಗ್ರ ತಂಡವಾಗಿ ಹೊರಹೊಮ್ಮಿದೆ. 15 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ಬ್ರೆಜಿಲ್ ತಂಡ ಅರ್ಹತಾ ಸುತ್ತಿನಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು 61ಕ್ಕೇರಿಸಿಕೊಂಡಿದೆ.
ಇನ್ನೊಂದು ಪಂದ್ಯದಲ್ಲಿ ಅರ್ಜೆಂಟಿನಾ ತಂಡ 1-0 ಗೋಲುಗಳಿಂದ ಕೊಲಂಬಿಯಾ ತಂಡವನ್ನು ಸೋಲಿಸಿದೆ. ಅರ್ಜೆಂಟಿನಾ ತಂಡದ ಪರ ಲೌಟಾರೊಪ ಮಾರ್ಟಿನೆಝ್ ಅವರು ಏಕೈಕ ಗೋಲು ದಾಖಲಿಸಿದ್ರು. ಗೆಲುವಿನೊಂದಿಗೆ ಅರ್ಜೆಂಟಿನಾ ತಂಡ ತನ್ನ ಗೆಲುವಿನ ಸಂಖ್ಯೆಯನ್ನು 29ಕ್ಕೇರಿಸಿಕೊಂಡಿದೆ.
ದಕ್ಷಿಣ ಅಮೆರಿಕಾದ ಟಾಪ್ -4 ತಂಡಗಳು ಕತಾರ್ ಫಿಫಾ ಟೂರ್ನಿಯಲ್ಲಿ ಆಡಲಿವೆ. ಈಗಾಗಲೇ ಬ್ರೆಜಿಲ್ ಮತ್ತು ಅರ್ಜೆಂಟಿನಾ ತಂಡಗಳು ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿವೆ. ಈಕ್ವೇಡಾರ್ ತಂಡ 24 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.