ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ವೆಸ್ಟ್ಇಂಡೀಸ್ ಸತತ ಎರಡನೇ ಪಂದ್ಯದಲ್ಲೂ ಶಾಕಿಂಗ್ ರಿಸಲ್ಟ್ ನೀಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 7 ರನ್ಗಳಿಂದ ಸೋಲಿಸಿದ ಕೆರಿಬಿಯನ್ಸ್ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ಇಂಡೀಸ್ಗೆ ಡಿಯಾಂಡ್ರ ಡಾಟಿನ್ (31) ಮತ್ತು ಹೇಲಿ ಮ್ಯಾಥ್ಯೂಸ್ (45) ಉತ್ತಮ ಆರಂಭ ತಂದುಕೊಟ್ಟರು. ಆದರೆ ಕೇಸಿಯಾ ನೈಟ್ (6) ಮತ್ತು ನಾಯಕಿ ಸ್ಟೆಫಾನಿ ಟೇಲರ್ (0) ಬೇಗನೆ ಔಟಾದರು. ಆದರೆ ಶೆಮೈನ್ ಕ್ಯಾಂಬೆಲ್ (66) ಮತ್ತು ಚೆಡನ ನೇಷನ್ (49) ಉತ್ತಮ ಆಟವಾಡಿ ತಂಡಕ್ಕೆ ನೆರವಾದರು.
ವೆಸ್ಟ್ಇಂಡೀಸ್ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 225 ರನ್ಗಳಿಸಿತು. ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕ್ಲಸ್ಟೋನ್ 3 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಹೋರಾಟ ಮಾಡಿತು. ಆರಂಭದಲ್ಲಿ ಲಾರೆನ್ ವಿನ್ಫೀಲ್ಡ್ ಹಿಲ್ (12), ಹೀದರ್ ನೈಟ್ (5), ನ್ಯಾಟ್ ಸಿವಿರ್ (2) ಮತ್ತು ಏಮಿ ಜೋನ್ಸ್ (1) ಹೆಚ್ಚು ಕೊಡುಗೆ ನೀಡದೇ ಇದ್ದರೂ ಟಾಮಿ ಬಿಮೌಂಟ್ 46 ರನ್ಗಳಿಸಿ ಮಿಂಚಿದರು.‘
ಡ್ಯಾನಿ ವ್ಯಾಟ್ (33) ಮತ್ತು ಸೋಫಿಯಾ ಡಂಕ್ಲಿ (38) ರನ್ಗಳಿಸಿ ತಂಡವನ್ನು ಆಧರಿಸಿದರು. ಆದರೆ 9ನೇ ವಿಕೆಟ್ಗೆ ಸೋಫಿ ಎಕ್ಲಸ್ಟೋನ್ ಅಜೇಯ 33 ಮತ್ತು ಕೆಥರಿನ್ ಕ್ರಾಸ್ 27 ರನ್ಗಳಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಆದರೆ 48ನೇ ಓವರ್ನಲ್ಲಿ ಅನಿಸಾ ಮೊಹಮ್ಮದ್, ಕ್ರಾಸ್ ಅವರನ್ನು ರನೌಟ್ ಮಾಡಿದರು. ಅನ್ಯ ಶ್ರುಬ್ಸೋಲ್ ಕ್ಲೀನ್ ಬೌಲ್ಡ್ ಆದರು. ಇಂಗ್ಲೆಂಡ್ 47.4 ಓವರುಗಳಲ್ಲಿ 218 ರನ್ಗಳಿಗೆ ಆಲೌಟ್ ಆಯಿತು. ವಿಂಡೀಸ್ 7 ರನ್ಗಳ ಜಯ ಸಾಧಿಸಿ ಮಿಂಚಿತು.