IPL 2022- ಸಿಎಸ್ ಕೆ ಗೆ ಬಿಗ್ ರಿಲೀಫ್ – ಲಭ್ಯರಾಗುತ್ತಾರೆ ದೀಪಕ್ ಚಾಹರ್..!

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ನಿಜಕ್ಕೂ ಸಿಹಿ ಸುದ್ದಿ. ತಂಡದ ದುಬಾರಿ ಬೆಲೆಯ ಆಟಗಾರ ದೀಪಕ್ ಚಾಹರ್ ಅವರು ಐಪಿಎಲ್ ಟೂರ್ನಿಯ ಮಧ್ಯದ ವೇಳೆಗೆ ಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಹೌದು, ದೀಪಕ್ ಚಾಹರ್ ಗಾಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಚಾಹರ್ ಅವರು ಎಂಟು ವಾರಗಳ ವಿಶ್ರಾಂತಿ ಬೇಕಿದೆ. ಹೀಗಾಗಿ ಏಪ್ರಿಲ್ ಮಧ್ಯದಲ್ಲಿ ಅವರು ಸಂಪೂರ್ಣವಾಗಿ ಗುಣಮುಖರಾಗುವ ಸಾದ್ಯತೆಗಳಿವೆ.
ಸಿಎಸ್ ಕೆ ತಂಡ ದೀಪಕ್ ಚಾಹರ್ ಅವರನ್ನು 14 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯದ ವೇಳೆ ಗಾಯಗೊಂಡಿದ್ದರು. ತೀವ್ರ ಸ್ವರೂಪದ ಗಾಯವಾಗಿರುವುದರಿಂದ ದೀಪಕ್ ಚಾಹರ್ ಅವರು ಐಪಿಎಲ್ ನಲ್ಲಿ ಆಡುವುದಿಲ್ಲ ಎಂಬ ಸುದ್ದಿಯೂ ಬಂದಿತ್ತು. ಆದ್ರೆ ಈಗ ದೀಪಕ್ ಚಾಹರ್ ಚೇತರಿಸಿಕೊಳ್ಳುತ್ತಿದ್ದು, ಟೂರ್ನಿಗೆ ಲಭ್ಯರಾಗುವ ಸಾಧ್ಯತೆಗಳು ಹೆಚ್ಚಿವೆ. ದೀಪಕ್ ಚಾಹರ್ ಮೇಲೆ ಸಿಎಸ್ ಕೆ ತಂಡ ನಿಗಾ ಇಟ್ಟಿದೆ. IPL 2022: Relief for CSK! Deepak Chahar likely to return mid-April
ಇನ್ನೊಂದೆಡೆ ದೀಪಕ್ ಚಾಹರ್ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದ ಅಗತ್ಯವೂ ಇತ್ತು. ಒಂದು ವೇಳೆ ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಿದ್ರೆ, ಐಪಿಎಲ್ ಹಾಗೂ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ಇಲ್ಲದೆಯೇ ಚೇತರಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರಂತೆ.
ಇನ್ನೊಂದೆಡೆ ಸಿಎಸ್ ಕೆ ತಂಡ ಐರ್ಲೆಂಡ್ ನ ವೇಗಿ ಜೋಸ್ ಲಿಟಿಲ್ ಅವರನ್ನು ನೆಟ್ ಬೌಲರ್ ಆಗಿ ತಂಡಕ್ಕೆ ಸೇರಿಸಿಕೊಂಡಿದೆ.
ಹಾಲಿ ಚಾಂಪಿಯನ್ ಆಗಿರುವ ಸಿಎಸ್ ಕೆ ತಂಡ ಸದ್ಯ ಸೂರತ್ ನಲ್ಲಿ ಅಭ್ಯಾಸ ನಡೆಸುತ್ತಿದೆ. ಮಾರ್ಚ್ 26ರಂದು ಕೆಕೆಆರ್ ವಿರುದ್ಧ ಸಿಎಸ್ ಕೆ ತಂಡ ಮೊದಲ ಪಂದ್ಯವನ್ನು ಆಡಲಿದೆ.