Rohitsharma – ಧೋನಿಯಂತ ಮ್ಯಾಚ್ ಫಿನಿಶರ್ ನಮಗೆ ಇನ್ನೂ ಸಿಕ್ಕಿಲ್ಲ – ರೋಹಿತ್ ಶರ್ಮಾ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ ನಂತರ ನಮಗೆ ಮ್ಯಾಚ್ ಫಿನಿಶರ್ ಸಿಕ್ಕಿಲ್ಲ ಎಂದು ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಹೇಳಿರುವುದರಲ್ಲಿ ನಿಜವಿದೆ. ಟೀಮ್ ಇಂಡಿಯಾ ಎಲ್ಲಿ ವೀಕ್ ಆಗಿದೆ ಎಂಬುದನ್ನು ಕೂಡ ನಾಯಕನಾಗಿ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ಫಿನಿಶರ್ ಬ್ಯಾಟ್ಸ್ ಮೆನ್ ಗಳ ಅಗತ್ಯವಿದೆ ಎಂಬುದನ್ನು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
We haven’t really found a finisher after Dhoni: Rohit Sharma
ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಚೆನ್ನಾಗಿಯೇ ಆಡುತ್ತಿದ್ದಾರೆ. ಆದ್ರೆ ಇವರಿಬ್ಬರ ಜೊತೆಗೆ ಇನ್ನು ಹೆಚ್ಚಿನ ಆಟಗಾರರು ಬರಬೇಕು. ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ಮ್ಯಾಚ್ ಫಿನಿಶಿಂಗ್ ಮಾಡುವ ಆಟಗಾರನ ಪಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಆದ್ರೆ ನಮಗೆ ಧೋನಿ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ ನಂತರ ಮ್ಯಾಚ್ ಫಿನಿಶಿಂಗ್ ಮಾಡುವಂತ ಬ್ಯಾಟ್ಸ್ ಮೆನ್ ನ ಕೊರತೆ ಕಾಡುತ್ತಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮುನ್ನ ರೋಹಿತ್ ಶರ್ಮಾ ಈ ರೀತಿ ಹೇಳಿದ್ದಾರೆ. ಫೆಬ್ರವರಿ 6ರಂದು ವೆಸ್ಟ್ ಇಂಡೀಸ್ ವಿರುದ್ಧದದ ಮೊದಲ ಪಂದ್ಯ ನಡೆಯಲಿದೆ.
ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆಗೆ ಹಾಸ್ಯಭರಿತವಾಗಿ ಮಾತನಾಡಿದ ರೋಹಿತ್ ಶರ್ಮಾ, ಹಾಗಿದ್ರೆ ನಿಮ್ಮ ಪ್ರಕಾರ ನನ್ನನ್ನು ಮತ್ತು ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಹೇಳುತ್ತಿದ್ದೀರಾ ಅಂತ ಹ್ಯಾಸವಾಗಿಯೇ ಹೇಳಿಕೊಂಡಿದ್ದಾರೆ ರೋಹಿತ್ ಶರ್ಮಾ.
ಮುಂಬರುವ ದಿನಗಳಲ್ಲಿ ನಾವು ಸಾಕಷ್ಟು ಪಂದ್ಯಗಳನ್ನು ಆಡಲಿದ್ದೇವೆ. ಯುವ ಆಟಗಾರರಿಗೆ ಅವಕಾಶ ಸಿಕ್ಕೇ ಸಿಗುತ್ತೆ. ಆದ್ರೆ ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಂಡು ತಂಡದಲ್ಲಿ ಸ್ಥಾನವನ್ನು ಭಧ್ರಪಡಿಸಿಕೊಳ್ಳಬೇಕು. ಶಿಖರ್ ಧವನ್ ದಕ್ಷಿಣ ಆಫ್ರಿಕಾದಲ್ಲಿ ಉತ್ತಮವಾಗಿಯೇ ಬ್ಯಾಟ್ ಬೀಸಿದ್ದರು. ಈಗ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೇ ರುತುರಾಜ್ ಗಾಯಕ್ವಾಡ್ ಕೂಡ. ಹೀಗಾಗಿ ಇಶಾನ್ ಕಿಶಾನ್ ಗೆ ಅವಕಾಶ ಸಿಕ್ಕಿದೆ. ಆದ್ರೆ ಅವಕಾಶಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.