Rohit Sharma- ಟೀಮ್ ಇಂಡಿಯಾ ಹುಡುಗರಿಗೆ ರೋಹಿತ್ ಶರ್ಮಾ ನೀಡಿರುವ ಸಲಹೆ ಏನು ?
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿಯೇ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0ಯಿಂದ ಮುನ್ನಡೆ ಕೂಡ ಪಡೆದುಕೊಂಡಿದೆ. ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಕೂಡ ನೀಡಿದ್ದರು. ಅಲ್ಲದೆ ಐತಿಹಾಸಿಕ ಒಂದು ಸಾವಿರನೇ ಏಕದಿನ ಪಂದ್ಯದಲ್ಲಿ ಗೆಲುವು ಕೂಡ ಸಾಧಿಸಿದೆ.
ಈ ನಡುವೆ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ತಂಡ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕು. ತಂಡಕ್ಕೆ ಏನು ಬೇಕೋ ಅದನ್ನು ಗುರಿಮುಟ್ಟುವಂತೆ ಮಾಡುವ ಸಾಮಥ್ರ್ಯವನ್ನು ಹೊಂದಿರಬೇಕು. ತಂಡಕ್ಕೆ ಏನಾದ್ರೂ ಬದಲಾವಣೆ ಬೇಕಾದ ಸಮಯದಲ್ಲಿ ಅದನ್ನು ಮಾಡುವಂತಹ ಸಾಮಥ್ರ್ಯವನ್ನು ಹೊಂದಿರಬೇಕು. ಹಾಗಂತ ಸಾಕಷ್ಟು ಬದಲಾವಣೆ ಮಾಡಬೇಕು ಎಂಬುದರತ್ತ ಹೆಚ್ಚು ಯೊಚನೆ ಮಾಡಬಾರದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. team india skipper Rohit sharma advice to his players
ಎಲ್ಲಾ ಅಟಗಾರರಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೇ. ನಿಮ್ಮ ಸಾಮಥ್ರ್ಯಕ್ಕೆ ನೀವೇ ಸವಾಲುಗಳನ್ನು ಹಾಕಿಕೊಳ್ಳಿ. ಸ್ವಲ್ಪ ಹೊಸತನದ ಬಗ್ಗೆ ಯೋಚಿಸಿ. ವಿಭಿನ್ನವಾಗಿ ಪ್ರಯತ್ನ ಪಡಿ. ಪರಿಸ್ಥಿತಿಗೆ ತಕ್ಕಂತೆ ಆಟವನ್ನಾಡಿ ಎಂದು ರೋಹಿತ್ ಶರ್ಮಾ ಟೀಮ್ ಇಂಡಿಯಾ ಆಟಗಾರರಿಗೆ ನಾಯಕನಾಗಿ ಕಿವಿ ಮಾತು ಹೇಳಿದ್ದಾರೆ.
ಆಟದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರುತ್ತೆ ಅಂತ ಹೇಳುವುದು ಸರಿಯಲ್ಲ. ಯಾಕಂದ್ರೆ ಯಾರು ಕೂಡ ಪರ್ಫೆಕ್ಟ್ ಆಗಿ ಆಡಲು ಸಾಧ್ಯವಿಲ್ಲ. ಆಟದಲ್ಲಿ ಪ್ರತಿಯೊಬ್ಬರ ಬದ್ದತೆ ಮುಖ್ಯವಾಗಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ರು.
ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಇದೀಗ ಕಮ್ ಬ್ಯಾಕ್ ಮಾಡಿದ್ದಾರೆ.
ನಾನು ಕಳೆದ ಎರಡು ತಿಂಗಳಿಂದ ಆಡಿಲ್ಲ. ಆದ್ರೆ ನಾನು ನೆಟ್ಸ್ ನಲ್ಲಿ ತಾಲೀಮ್ ನಡೆಸಿದ್ದೇನೆ. ನನ್ನಲ್ಲಿ ಆಡುತ್ತೇನೆ ಅನ್ನೋ ಆತ್ಮ ವಿಶ್ವಾಸ ಮೂಡಿದೆ. ಈ ಪಂದ್ಯದಿಂದ ನನಗೆ ಹೆಚ್ಚು ನಂಬಿಕೆ ಬಂದಿದೆ ಅಂತಾರೆ ರೋಹಿತ್ ಶರ್ಮಾ.