ಕಳೆದ 10 ವರ್ಷಗಳ ಐಪಿಎಲ್‌ನಲ್ಲಿ ಮೊದಲ ಬಾರಿಗೆ ವಿರಾಟ್ ಸರಾಸರಿ 20ಕ್ಕಿಂತ ಕಡಿಮೆಯಾಗಿದೆ. ಅಭಿಮಾನಿಗಳ ನೆಚ್ಚಿನ ಕಿಂಗ್ ಕೊಹ್ಲಿ ಈ ಋತುವಿನಲ್ಲಿ ಕೇವಲ 19.6 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲೂ ಕೊಹ್ಲಿ ಕಳಪೆ ಫಾರ್ಮ್ ಮುಂದುವರೆದಿದೆ. ಸ್ಪಿನ್ನರ್ ಜೆ ಸುಚಿತ್ ಎಸೆತದಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾದರು. ಈ ಋತುವಿನಲ್ಲಿ ಮೂರನೇ ಬಾರಿಗೆ ವಿರಾಟ್ ಯಾವುದೇ ರನ್ ಗಳಿಸದೆ ಪೆವಿಲಿಯನ್ ಕಡೆಗೆ ನಡೆದರು. ಇದರೊಂದಿಗೆ ಕೋಟ್ಯಂತರ ಅಭಿಮಾನಿಗಳ ಹೃದಯ ಒಡೆದಿದೆ.

ಒಂದು ಕಾಲದಲ್ಲಿ ವಿಶ್ವದ ಎಲ್ಲಾ ಬೌಲರ್‌ಗಳನ್ನು ತಮ್ಮ ಹೆಸರಿನಿಂದಲೇ ನಡುಗಿಸುತ್ತಿದ್ದ ವಿರಾಟ್ ಕೊಹ್ಲಿ ಇಂದು ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಐಪಿಎಲ್ 15 ರಲ್ಲಿ, ಅವರು 3 ಬಾರಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ. 3 ವರ್ಷ ಕಳೆದರೂ ವಿರಾಟ್ ಬ್ಯಾಟ್ ನಿಂದ ಶತಕ ಬರಲಿಲ್ಲ.
ಮೊದಲಿನಂತೆ ವಿರಾಟ್ ಹೊಡೆತದಲ್ಲಿ ಆತ್ಮವಿಶ್ವಾಸ ಕಾಣುತ್ತಿಲ್ಲ. ಆಗ ಒಮ್ಮೆ ಅವರು ಫ್ಲಿಕ್ ಶಾಟ್ ಬಾರಿಸಿದರೆ ಬೌಂಡರಿ ಗ್ಯಾರಂಟಿ. ಈಗ ಅದು ಸುಲಭವಾಗಿ ಕ್ಯಾಚ್ ಆಗಿ ಬದಲಾಗುತ್ತದೆ. ವಿರಾಟ್ ಸಹ ಆಟಗಾರರ ಜೊತೆ ಈ ಹಿಂದೆ ಹೇಗೆ ಸಂಭ್ರಮಿಸುತ್ತಿದ್ದರೋ ಅದೇ ರೀತಿ ಇಂದಿಗೂ ವಿರಾಟ್ ಸಂಭ್ರಮಿಸುತ್ತಿದ್ದಾರೆ. ದಿನೇಶ್ ಕಾರ್ತಿಕ್ ಪಂದ್ಯವನ್ನು ಮುಗಿಸಿದಾಗ, ವಿರಾಟ್ ಅದನ್ನು ಪೂರ್ಣವಾಗಿ ಆನಂದಿಸಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿರುವ ಸಂಜಯ್ ಬಂಗಾರ್ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. RCB ಬ್ಯಾಟಿಂಗ್ ಕೋಚ್ ಸಂಜಯ್ ವಿರಾಟ್ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಇನ್ನೂ ತಂಡದ ದೊಡ್ಡ ಮ್ಯಾಚ್ ವಿನ್ನರ್ ಎಂದು ಬಂಗಾರ್ ಅವರಿಗೆ ತಿಳಿದಿದೆ ಮತ್ತು RCB ಅವರ ಚೊಚ್ಚಲ IPL ಟ್ರೋಫಿಯನ್ನು ಗೆಲ್ಲಬೇಕಾದರೆ, ವಿರಾಟ್ ಅವರ ದೊಡ್ಡ ಸ್ಕೋರ್ ಅತ್ಯಗತ್ಯ. ವಿರಾಟ್‌ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದು ಜಗತ್ತಿಗೇ ಗೊತ್ತು.
ಇದಕ್ಕೂ ಮುನ್ನ ವಿರಾಟ್ ಸನ್ ರೈಸರ್ಸ್ ವಿರುದ್ಧ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಎದುರು ಕೂಡ ವಿರಾಟ್ ಬ್ಯಾಟ್‌ನಿಂದ ಯಾವುದೇ ರನ್ ಬಂದಿರಲಿಲ್ಲ. ವಿರಾಟ್ ಋತುವಿನಲ್ಲಿ ಎರಡನೇ ಬಾರಿಗೆ SRH ವಿರುದ್ಧ ಸೊನ್ನೆ ಸುತ್ತಿದ್ದು ನಿಜಕ್ಕೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಅನುಜ್ ರಾವತ್ ಅವರ ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು, ಆರ್‌ಸಿಬಿ ಕೊಹ್ಲಿಯನ್ನು ಇನ್ನಿಂಗ್ಸ್ ಆರಂಭಿಸಲು ಸೂಚಿಸಿತು. ಆದರೆ ಇದುವರೆಗೆ ಆ ನಿರ್ಧಾರವು ತಂಡದ ಹಿತದೃಷ್ಟಿಯಿಂದ ವರವಾಗಿಲ್ಲ. SRH ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾದರು.
ವಿರಾಟ್ ತಂಡದ ನಾಯಕತ್ವವನ್ನು ತೊರೆದಾಗ, ಈ ಋತುವಿನಲ್ಲಿ ಕೊಹ್ಲಿ ಅಬ್ಬರಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರ ಉಲ್ಟಾ ಹೊಡೆದಿದೆ.