ಐಪಿಎಲ್ 2022ರ 67ನೇ ಪಂದ್ಯ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಕಾದಾಟ ನಡೆಸಲಿವೆ. ಇದು ಉಭಯ ತಂಡಗಳ ಕೊನೆಯ ಲೀಗ್ ಪಂದ್ಯ. ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಜಿಮ್ ನಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಅದರ ವಿಡಿಯೋವನ್ನು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಫಲಿತಾಂಶ ನಿಮ್ಮ ಕೈಯಲ್ಲಿಲ್ಲ, ಶ್ರಮ ಮತ್ತು ಪ್ರಯತ್ನ ನಿಮ್ಮ ಕೈಯಲ್ಲಿದೆ’ ಎಂದು ಟ್ವೀಟ್‌ನ ಶೀರ್ಷಿಕೆಯಲ್ಲಿ ಕೊಹ್ಲಿ ಬರೆದಿದ್ದಾರೆ.
"Results aren't in your hands, effort and hardwork is" 💪🏽 pic.twitter.com/6xtBcEk7YH
— Virat Kohli (@imVkohli) May 16, 2022
ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪ್ರದರ್ಶನವು ಸ್ಥಿರವಾಗಿಲ್ಲ. ಅವರು ಸತತವಾಗಿ ರನ್ ಗಳಿಸಲು ಹೆಣಗಾಡುತ್ತಿರುವುದು ಕಂಡುಬಂದಿದೆ. ಇಂದು ವಿರಾಟ್ ಕೊಹ್ಲಿ ಶೇರ್ ಮಾಡಿರುವ ವೇಟ್ ಲಿಫ್ಟಿಂಗ್ ವಿಡಿಯೋಗೆ ಸಾವಿರಾರು ಲೈಕ್ಸ್ ಸಿಕ್ಕಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಜಿಮ್‌ನ ಮತ್ತೊಂದು ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಇದರಲ್ಲಿ ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಬೆವರು ಸುರಿಸಿದ್ದರು. ಕೊಹ್ಲಿಯ ಈ ವೀಡಿಯೋ ಕೂಡ ಅಭಿಮಾನಿಗಳಿಂದ ಸಾಕಷ್ಟು ಇಷ್ಟ ಪಟ್ಟಿದ್ದರು.

ಐಪಿಎಲ್ 2022ರಲ್ಲಿ ವಿರಾಟ್ ಕೊಹ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಅವರು ಇಲ್ಲಿಯವರೆಗೆ 13 ಪಂದ್ಯಗಳಲ್ಲಿ 20 ಕ್ಕಿಂತ ಕಡಿಮೆ ಸರಾಸರಿ ಮತ್ತು 113 ರ ಸ್ಟ್ರೈಕ್ ರೇಟ್‌ನಲ್ಲಿ 236 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ, ಅವರು 3 ಬಾರಿ ಸೊನ್ನೆ ಸುತ್ತಿದ್ದಾರೆ. ವಿರಾಟ್ ಕೊಹ್ಲಿ ನಿರಂತರವಾಗಿ ರನ್ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಲವು ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿಗೆ ವಿಶ್ರಾಂತಿ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಕೊಹ್ಲಿಗೆ ವಿಶ್ರಾಂತಿ ನೀಡಬಹುದು.