Virat Record T20 : ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಕನದಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಪಂದ್ಯದಲ್ಲಿ ಎಲ್ಲರ ಚಿತ್ತ ಇರೋದು ಕಿಂಗ್ ಕೊಹ್ಲಿ ವಿರಾಟ್ ಮೇಲೆ. ರನ್ ಮಷೀನ್ ವಿರಾಟ್ ಕೊಹ್ಲಿ ಸಿಡಿದೆದ್ರೆ ಟೀಮ್ ಇಂಡಿಯಾ ಫೈನಲ್ಗೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ.
ಟಿ20 ಯಲ್ಲಿ ವಿರಾಟ್ ರನ್ ಮಳೆ ಸುರಿಸಿದ್ದಾರೆ. ಯಾವ ತಂಡಗಳ ವಿರುದ್ಧ ಎಷ್ಟು ರನ್ ಹೊಡೆದಿದ್ದಾರೆ ಎಂದು ನೋಡುವುದಾದ್ರೆ. ಆಸ್ಟ್ರೇಲಿಯಾ 21 ಇನ್ನಿಂಗ್ಸ್ ಗಳಿಂದ 794 ರನ್ ಹೊಡೆದಿದ್ದು 8 ಅರ್ಧ ಶತಕ ಸಿಡಿಸಿದ್ದಾರೆ. 144 ಸ್ಟ್ರೇಕ್ ರೇಟ್ ಹೊಂದಿದ್ದು 52.93 ಎವರೇಜ್ ಹೊಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ 19 ಇನ್ನಿಂಗ್ಸ್ ಗಳಿಂದ 589 ರನ್ ಹೊಡೆದಿದ್ದು 4 ಅರ್ಧ ಶತಕ ಸಿಡಿಸಿದ್ದಾರೆ.137 ಸ್ಟ್ರೇಕ್ ರೇಟ್ ಹೊಂದಿದ್ದು 39.27 ಎವರೇಜ್ ಹೊಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 13 ಇನ್ನಿಂಗ್ಸ್ ಗಳಿಂದ 570 ರನ್ ಚಚ್ಚಿದ್ದಾರೆ.6 ಅರ್ಧ ಶತಕ ಸಿಡಿಸಿದ್ದಾರೆ. 151 ಸ್ಟ್ರೇಕ್ ರೇಟ್ ಹೊಂದಿದ್ದು 57 ಎವರೇಜ್ ಹೊಂದಿದ್ದಾರೆ.
ಪಾಕಿಸ್ತಾನ ವಿರುದ್ಧ 10 ಇನ್ನಿಂಗ್ಸ್ ಗಳಿಂದ 488 ರನ್ ಸಿಡಿಸಿದ್ದು 5 ಅರ್ಧ ಶತಕ ಸಿಡಿಸಿದ್ದಾರೆ.488 ರನ್ ಕಲೆ ಹಾಕಿ 124 ಸ್ಟ್ರೇಕ್ ರೇಟ್ ನೊಂದಿಗೆ 81.33 ಎವರೇಜ್ ಹೊಂದಿದ್ದಾರೆ.
ಶ್ರೀಲಂಕಾ ವಿರುದ್ಧ 7 ಇನ್ನಿಂಗ್ಸ್ ಗಳಿಂದ 339 ರನ್ ಪೇರಿಸಿದ್ದಾರೆ.4 ಅರ್ಧ ಶತಕ ಸಿಡಿಸಿದ್ದು 67.8 ಎವರೇಜ್ ನೊಂದಿಗೆ 138.4 ಸ್ಟ್ರೇಕ್ ರೇಟ್ ಹೊಂದಿದ್ದಾರೆ.