ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಅಬ್ಬರಿಸಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಮೂರನೆ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 28 ಎಸೆತದಲ್ಲಿ 7 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 49 ರನ್ ಗಳಿಸಿದರು. ಅರ್ಧ ಶತಕ ಗಳಿಸದಿದ್ದರೂ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
49 ರನ್ ಹೊಡೆಯುವ ಮೂಲಕ ಟಿ20 ಆವೃತ್ತಿಯಲ್ಲಿ 11 ಸಾವಿರ ರನ್ ಪೂರೈಸಿದ ಭಾರತದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ನಾಲ್ಕನೆ ಬ್ಯಾಟರ್ ಆಗಿದ್ದಾರೆ.
ಟಿ20 ಆವೃತ್ತಿಯಲ್ಲಿ 2007ರಿಂದ 2022ರವರೆಗೆ ಟಿ20 ಆವೃತ್ತಿಯಲ್ಲಿ ವಿರಾಟ್ 337 ಇನ್ನಿಂಗ್ಸ್ ಗಳಿಂದ 6 ಶತಕ ಹಾಗೂ 81 ಅರ್ಧ ಶತಕಗಳನ್ನು ವಿರಾಟ್ ಸಿಡಿಸಿದ್ದಾರೆ.
ಟಿ20 ಫಾರ್ಮೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಕೆರೆಬಿಯನ್ ಕಿಂಗ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಇನ್ನಿಂಗ್ಸ್ ಗಳಿಂದ 14,562 ರನ್ ಹೊಡೆದು ಮೊದಲ ಸ್ಥಾನ ಪಡೆದಿದ್ದಾರೆ.
ಎರಡನೆ ಸ್ಥಾನದಲ್ಲಿ ವಿಂಡಿಸ್ ಆಲ್ರೌಂಡರ್ ಕಿರಾನ್ ಪೋಲಾರ್ಡ್ 11915 ರನ್, ಪಾಕ್ ನ ಶೋಯೆಬ್ ಮಲ್ಲಿಕ್ 11,902 ರನ್
ಮತ್ತೊಂದು ಅಚ್ಚರಿ ಘಟನೆಯೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ 49 ರನ್ ಗಳಿಸಿದ್ದಾಗ ಅರ್ಧ ಶತಕ ಸಿಡಿಸಲು ಅವಕಾಶವಿತ್ತು.
ಆದರೆ ವಿರಾಟ್ ದಿನೇಶ್ ಕಾರ್ತಿಕ್ ಗೆ ಪಂದ್ಯ ಫಿನೀಶ್ ಮಾಡುವಂತೆ ಬಿಟ್ಟು ಕೊಟ್ಟರು. ದಿನೇಶ್ ಕಾರ್ತಿಕ್ ಅರ್ಧ ಶತಕ ಪೂರೈಸಿಕೊಳ್ಳುವಂತೆ ವಿರಾಟ್ ಗೆ ಹೇಳಿದರೂ ವಿರಾಟ್ ಕೇಳಲಿಲ್ಲ.