ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಹೊಸ ದಾಖಲೆ ಬರೆದಿದ್ದಾರೆ.
ಗುವಾಹಟಿಯಲ್ಲಿ ನಡೆದ ಎರಡನೆ ಟಿ20 ಪಂದ್ಯದಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಕೇವಲ 22 ಎಸೆತದಲ್ಲಿ 5 ಬೌಂಡರಿ 5 ಸಿಕ್ಸರ್ ಸಿಡಿಸಿ 61 ರನ್ ಹೊಡೆದರು.
ಈ ಅರ್ಧ ಶತಕವನ್ನು 18 ಎಸೆತಗಳಲ್ಲಿ ಸೂರ್ಯ ಕುಮಾರ್ ಸಿಡಿಸಿದ್ದಾರೆ ಆನ್ನೋದೇ ವಿಶೇಷ. ತಂಡದ ಪರವಾಗಿ ವೇಗವಾಗಿ ಅರ್ಧ ಶತಕ ಸಿಡಿಸಿದ ಎರಡನೆ ಬ್ಯಾಟರ್ ಎನಿಸಿದರು. ಇದರೊಂದಿಗೆ ಕನ್ನಡಿಗ ಕೆ.ಎಲ್.ರಾಹುಲ್ ಅವರ ದಾಖಲೆಯನ್ನು ಸರಿಗಟ್ಟಿದರು.
ಕನ್ನಡಿಗ ಕೆ.ಎಲ್. ರಾಹುಲ್ ಸ್ಕಾಟ್ ಲ್ಯಾಂಡ್ ವಿರುದ್ಧ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು.
ಇದಕ್ಕೂ ಮುನ್ನ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ 12 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ವಿಶ್ವ ದಾಖಲೆ ಬರೆದಿದ್ದರು.
ಈ ವೇಗದ ಅರ್ಧ ಶತಕದೊಂದಿಗೆ ಸೂರ್ಯ ಕುಮಾರ್ ವೇಗದ ಅರ್ಧ ಶತಕ ಪೂರೈಸಿದ ತಂಡದ ಎರಡನೆ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದು ಯುವರಾಜ್ ಸಿಂಗ್ ಮತ್ತು ಕೆ.ಎಲ್. ರಾಹುಲ್ ಅವರ ಸಾಲಿಗೆ ಸೇರಿಕೊಂಡಿದ್ದಾರೆ.