ದ್ರಾವಿಡ್ ದಾಖಲೆ ಮುರಿಯಲು ವಿರಾಟ್ ಗೆ ಬೇಕು 66 ರನ್ Virat sportskarnataka
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಇನ್ನೂ ಕೇವಲ 66 ರನ್ ಗಳಿಸಿದರೇ ರಾಹುಲ್ ದ್ರಾವಿಡ್ ದಾಖಲೆ ಮುರಿಯಲಿದ್ದಾರೆ.
ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಗಳ ಪಟ್ಟಿನಲ್ಲಿ ರಾಹುಲ್ ದ್ರಾವಿಡ್ ಅವರನ್ನ ಹಿಂದಿಕ್ಕಿ ವಿರಾಟ್ 2ನೇ ಸ್ಥಾನಕ್ಕೇರಲಿದ್ದಾರೆ.
ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ 11 ಪಂದ್ಯಗಳಲ್ಲಿ 22 ಇನ್ನಿಂಗ್ಸ್ಗಳಿಂದ 624 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಗಳಿವೆ.
ಆ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ ರಾಹುಲ್ ದ್ರಾವಿಡ್.
ಇನ್ನ ವಿರಾಟ್ ಕೊಹ್ಲಿ 5 ಟೆಸ್ಟ್ಪಂದ್ಯಗಳಿಂದ 55ರ ಸರಾಸರಿಯಲ್ಲಿ 558 ರನ್ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧಶತಕಗಳು ಸೇರಿವೆ.
ಸದ್ಯ ಆಫ್ರಿಕಾದಲ್ಲಿರುವ ವಿರಾಟ್ 66 ರನ್ ಗಳಿಸಿದರೇ ದ್ರಾವಿಡ್ ಅವರನ್ನ ದಾಟಿ ಎರಡನೇ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇನ್ನು ಆಫ್ರಿಕಾದ ನೆಲದಲ್ಲಿ ಸಚಿನ್ ತೆಂಡೂಲ್ಕರ್ 28 ಇನ್ನಿಂಗ್ಸ್ಗಳಲ್ಲಿ 1161 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಅವರು 5 ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದಾರೆ.