ಕ್ರಿಕೆಟಿಗರ ಜೀವನದಲ್ಲಿ ವೈಫಲ್ಯ ಅನ್ನುವುದು ಇದ್ದೇ ಇರುತ್ತದೆ. ಆದರೆ ವಿರಾಟ್ ಕೊಹ್ಲಿಯ (Virat Kohli)ವೈಫಲ್ಯದ ಟೈಮ್ ಪಿರಿಯಡ್ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗೇ ಆಯಿತು. ಕಳೆದ ಎರಡೂ ವರ್ಷಗಳಿಂದ ಶತಕಕ್ಕಾಗಿ ಪರದಾಡುತ್ತಿರುವ ವಿರಾಟ್ ಕೊಹ್ಲಿ ಈಗ ಏಕದಿನ ಕ್ರಿಕೆಟ್ನಲ್ಲೂ ವೈಫಲ್ಯದ (Batting Form) ಮೇಲೆ ವೈಫಲ್ಯ ಕಾಣುತ್ತಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನ (ODI) ಕಿಂಗ್. ಆದರೆ ಈ ಸುಲ್ತಾನನ ಕಿರೀಟ ಈಗ ಕಳಚಿ ಬೀಳುತ್ತಿದೆಯಾ ಅನ್ನುವ ಪ್ರಶ್ನೆ ಎದ್ದಿದೆ. ಯಾಕಂದರೆ ತನ್ನ ಫೆವರೀಟ್ ಫಾರ್ಮೆಟ್ನ ಆಟದಲ್ಲೇ ಕೊಹ್ಲಿ ಮುಗ್ಗರಿಸಿದ್ದಾರೆ. ಕೇವಲ ಪಂದ್ಯದಲ್ಲಿ ಮಾತ್ರವಲ್ಲ, ಎರಡರಲ್ಲಿ ಅಲ್ಲ, ಬರೋಬ್ಬರಿ 5 ಪಂದ್ಯಗಳಿಂದ ವಿರಾಟ್ 20 ರನ್ಗಳಿಸಲು ಪರದಾಟ ನಡೆಸುತ್ತಿದ್ದಾರೆ.
Yes… ವಿರಾಟ್ ಕೊಹ್ಲಿ ಕಳೆದ 5 ಇನ್ನಿಂಗ್ಸ್ಗಳಲ್ಲಿ ಗಳಿಸಿದ್ದು ಕೇವಲ 59 ರನ್ ಮಾತ್ರ. ವೆಸ್ಟ್ಇಂಡೀಸ್ (West Indies) ವಿರುದ್ಧ ತವರಿನಲ್ಲಿ 3 ಪಂದ್ಯಗಳನ್ನು ಆಡಿದರೆ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಆಡಿದ್ದರು. ವಿಂಡೀಸ್ ವಿರುದ್ಧ ಅಹ್ಮದಾಬಾದ್ನಲ್ಲೇ 3 ಪಂದ್ಯ ನಡೆದಿತ್ತು. ಈ ಪಂದ್ಯಗಳಲ್ಲಿ ಕೊಹ್ಲಿ 8. 18 ಮತ್ತು 0 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಲಾರ್ಡ್ಸ್ನಲ್ಲಿ ಕೊಹ್ಲಿ 16 ರನ್ಗಳಿಗೆ ಔಟಾದರೆ, ಮ್ಯಾಂಚೆಸ್ಟರ್ನಲ್ಲಿ 17 ರನ್ಗಳಿಗೆ ಆಟ ಮುಗಿಸಿದರು.
2022ರಲ್ಲಿ 8 ಪಂದ್ಯ, 2 ಅರ್ಧಶತಕ, 2 ಶೂನ್ಯ
ವಿರಾಟ್ ಈ ವರ್ಷ ಆಡಿದ್ದು ಎಂಟೇ ಎಂಟು ಏಕದಿನ ಪಂದ್ಯಗಳನ್ನು. ಆದರೆ ಬಾರಿಸಿದ್ದ ಕೇವಲ 2 ಅರ್ಧಶತಕ. 2 ಇನ್ನಿಂಗ್ಸ್ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದು. ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಇಷ್ಟು ದೊಡ್ಡ ವೈಫಲ್ಯವನ್ನು ಮೊದಲ ಬಾರಿಗೆ ಅನುಭವಿಸಿದ್ದಾರೆ. ವಿರಾಟ್ ವೈಫಲ್ಯಕ್ಕೆ ಕಾರಣ ಯಾವುದು ಅನ್ನುವುದು ಇನ್ನೂ ರಹಸ್ಯವಾಗಿಯೇ ಇದೆ.
ಅಂದ ಹಾಗೇ ವಿರಾಟ್ 14 ವರ್ಷಗಳ ವೃತ್ತಿ ಜೀವನದಲ್ಲಿ 262 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 43 ಶತಕಗಳನ್ನು ಸಿಡಿಸಿ ಸಚಿನ್ ಬಳಿಕ ಅತಿಹೆಚ್ಚು ಶತಕ ಸಿಡಿಸಿದ ಆಟಗಾರನಾಗಿದ್ದಾರೆ. 12344 ರನ್ ಕೂಡ ಗಳಿಸಿದ್ದಾರೆ. ಆದರೆ ವಿರಾಟ್ ಈಗ ಹಿಂದಿನ ವಿರಾಟ್ ಆಗಿ ಉಳಿದಿಲ್ಲ. ಮ್ಯಾಚ್ ವಿನ್ನರ್ ಆಘಿ ಎದುರಾಳಿ ಮೇಲೆ ಒತ್ತಡ ಹೇರುತ್ತಿದ್ದ ವಿರಾಟ್ ಈಗ ತಾನೇ ಒತ್ತಡದಲ್ಲಿ ಬಿದ್ದಿದ್ದಾರೆ. ಆದರೆ ಕಂ ಬ್ಯಾಂಕ್ ಇನ್ನಿಂಗ್ಸ್ ಅಂತ ಒಂದು ಇದ್ದೇ ಇರುತ್ತದೆ. ಯಾಕಂದರೆ ಪ್ರತಿದಿನವೂ ಭಾನುವಾರ ಆಗಿರುವುದಿಲ್ಲ. ಒಮ್ಮೆ ಭಾನುವಾರದ ರುಚಿ ಸಿಕ್ಕರೆ ಎದುರಾಳಿಗಳು ಮಣ್ಣುಮುಕ್ಕುವುದು ಖಚಿತ.