ನಟರ ಪುತ್ರರು ನಟರಾಗುತ್ತಾರೆ. ಇಲ್ಲ ಸಿನಿಮಾ ಫೀಲ್ಡ್ನಲ್ಲಿ ಬೇರೊಂದು ಕೆಲಸ ಮಾಡುತ್ತಿರುತ್ತಾರೆ. ಆದರೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಮನಗೆದ್ದಿರುವ ಆರ್ ಮಾಧನವನ್ ( R Madhavan) ಪುತ್ರ ವೇದಾಂತ್ ಮಾಧವನ್ (Vedant Madhavan) ರಾಷ್ಟ್ರದ ಕೀರ್ತಿ ಹೆಚ್ಚಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಪಂಟರ್ ಆಗಿ ಬೆಳೆದಿರುವ ವೇದಾಂತ್ ಈಗ ಪದಕಗಳ ಮೇಲೆ ಪದಕ ಗೆದ್ದು ದಾಖಲೆ ನಿರ್ಮಿಸುತ್ತಿದ್ದಾರೆ.
1,500 ಮೀಟರ್ ಫ್ರೈಸ್ಟೈಲ್ ಸ್ವಿಮ್ಮಿಂಗ್ (Freestyle Swimming) ಕಿರಿಯರ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ. ಜ್ಯೂನಿಯರ್ ಅಕ್ವೆಟಿಕ್ಸ್ ಫ್ರೀಸ್ಟೈಲ್ 1500 ಮೀಟರ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು 16 ನಿಮಿಷದಲ್ಲಿ ಪೂರ್ಣಗೊಳಿಸಿದ ದಾಖಲೆಯನ್ನು ವೇದಾಂತ್ ಮಾಧವನ್ ಮುರಿದಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಪುತ್ರನ ಸಾಧನೆಯನ್ನು ನಟ ಮಾಧನವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
780 ಮೀಟರ್ ಬಳಿಕ ವೇದಾಂತ್ ವೇಗ ಹೆಚ್ಚಿಸಿಕೊಂಡು ಕ್ಷಣಾರ್ಧದಲ್ಲೇ ಗುರಿ ತಲುಪಿದ ವೇದಾಂತ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅತ್ಯುತ್ತಮ ವೇಗ ಹಾಗೂ ಸರಿಯಾದ ಕ್ರಮದ ಈಜಿನಿಂದ ಇದು ಸಾಧ್ಯವಾಗಿದೆ ಎಂದು ವೀಕ್ಷಕ ವಿವರಣೆಗಾರ ಹೇಳಿದ್ದಾರೆ. ಡೆನ್ಮಾರ್ಕ್ನ ಕೊಪನ್ಹೆಗೇನ್ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಸ್ಪರ್ಧೆಯಲ್ಲಿ ಭಾರತದ ವೇದಾಂತ್ ಮಾಧವನ್ ಚಿನ್ನದ ಪದಕ ಗೆದ್ದಿದ್ದರು. 16 ವರ್ಷದ ವೇದಾಂತ್ ಪುರುಷರ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 8 ನಿಮಿಷ 17.28 ಸೆಕೆಂಡ್ಗಳಲ್ಲಿ ಗುರಿ ತಲುಪಿ ಸ್ವರ್ಣ ತಮ್ಮದಾಗಿಸಿಕೊಂಡಿದ್ದರು. ಇದಕ್ಕೂ ಮೊದಲು ಶುಕ್ರವಾರ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 15.57.86 ನಿಮಿಷದಲ್ಲಿ ಗುರಿ ಮುಟ್ಟಿದ್ದ ವೇದಾಂತ್ ಬೆಳ್ಳಿ ಗೆದ್ದಿದ್ದರು.