Virat Kohli – ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ..?

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಕೋವಿಡ್ ಸೋಂನಿಂದ ಬಳಲುತ್ತಿದ್ದರು. ಅಲ್ಲದೆ ಇದೀಗ ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಆದ್ರೆ ಇದು ಎಷ್ಟು ನಿಜ ಎಂಬುದು ಗೊತ್ತಿಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿ ಈಗಾಗಲೇ ಇಂಗ್ಲೆಂಡ್ ನಲ್ಲಿದ್ದಾರೆ. ಅಲ್ಲದೆ ತಂಡದ ಸಹ ಆಟಗಾರರ ಜೊತೆ ಅಭ್ಯಾಸದಲ್ಲೂ ನಿರತರಾಗಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ಟೆಸ್ಟ್ ಆಟಗಾರರ ಜೊತೆ ವಿರಾಟ್ ಕೊಹ್ಲಿ ಮಾತನಾಡುತ್ತಿರುವ ವಿಡಿಯೋ ಕೂಡ ಇದೆ.
Game mode = 𝒂𝒄𝒕𝒊𝒗𝒂𝒕𝒆𝒅 💪@imVkohli gives a 𝗽𝗮𝘀𝘀𝗶𝗼𝗻𝗮𝘁𝗲 team talk ahead of a busy day of preparations before @BCCI's Tour Match 🆚 @leicsccc.
🦊 #IndiaTourMatch | #LEIvIND pic.twitter.com/zDxP53Slxd
— Leicestershire CCC 🏏 (@leicsccc) June 21, 2022
Virat Kohli -Virat Kohli Infected With COVID-19 After Returning From Maldives
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಐಪಿಎಲ್ ಬಳಿಕ ಮಾಲ್ಡೀವ್ಸ್ ಗೆ ತನ್ನ ಕುಟುಂಬದ ಜೊತೆ ಪ್ರವಾಸ ಕೈಗೊಂಡಿದ್ದರು. ಸುದೀರ್ಘ ವಿಶ್ರಾಂತಿಯ ನಂತರ ವಿರಾಟ್ ಕೊಹ್ಲಿ ಜೂನ್ 16ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದರು. ಈ ನಡುವೆ, ಮಾಲ್ಡೀವ್ಸ್ ಪ್ರವಾಸದ ವೇಳೆ ವಿರಾಟ್ ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ವರದಿಯಾಗಿದೆ.
ಒಂದು ವೇಳೆ ವಿರಾಟ್ ಕೊಹ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ರೆ, ಜೂನ್ 24ರಿಂದ ನಡೆಯಲಿರುವ ಅಭ್ಯಾಸ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಆದ್ರೆ ಈ ಬಗ್ಗೆ ಬಿಸಿಸಿಐ ಅಥವಾ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಯಾವುದೇ ಸ್ಪಷ್ಟನೆ ಮತ್ತು ಮಾಹಿತಿಯನ್ನು ನೀಡಿಲ್ಲ.
ಈಗಾಗಲೇ ಟೀಮ್ ಇಂಡಿಯಾದ ಆಲ್ ರೌಂಡರ್ ಆರ್. ಅಶ್ವಿನ್ ಅವರು ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಶ್ವಿನ್ ಅವರು ಏಕೈಕ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಜುಲೈ 1ರಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯ ಕಳೆದ ವರ್ಷ ರದ್ದುಗೊಂಡಿರುವ ಐದನೇ ಟೆಸ್ಟ್ ಪಂದ್ಯವಾಗಿದೆ. 2021ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಿತ್ತು. ಈ ಸರಣಿಯ ಅಂತಿಮ ಪಂದ್ಯ ಕೋವಿಡ್ ಸೋಂಕಿನಿಂದಾಗಿ

ರದ್ದುಗೊಂಡಿತ್ತು. ಅಲ್ಲದೆ ಆ ಸರಣಿಯಲ್ಲಿ ಟೀಮ್ ಇಂಡಿಯಾ 2-1ರಿಂದ ಮುನ್ನಡೆ ಕೂಡ ಪಡೆದುಕೊಂಡಿತ್ತು. ಇದೀಗ ನಡೆಯಲಿರುವ ಟೆಸ್ಟ್ ಸರಣಿಯನ್ನು ಗೆದ್ದುಕೊಂಡು ಟೀಮ್ ಇಂಡಿಯಾ ಅಂತರವನ್ನು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ. ಇನ್ನೊಂದೆಡೆ ಇಂಗ್ಲೆಂಡ್ ಸರಣಿಯನ್ನು ಸಮಗೊಳಿಸುವತ್ತ ಚಿತ್ತವನ್ನಿಟ್ಟಿದೆ.
ಇನ್ನು ಕಳೆದ ಒಂದು ವರ್ಷದಿಂದ ಉಭಯ ತಂಡಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಿವೆ. ಇಂಗ್ಲೆಂಡ್ ತಂಡವನ್ನು ಜಾಯ್ ರೂಟ್ ಬದಲು ಬೆನ್ ಸ್ಟ್ರೋಕ್ಸ್ ಅವರು ಮುನ್ನಡೆಸಲಿದ್ದಾರೆ. ಅದೇ ರೀತಿ ಕೋಚ್ ಕೂಡ ಬದಲಾಗಿದ್ದಾರೆ. ಸದ್ಯ ಇಂಗ್ಲೆಂಡ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇನ್ನೊಂದೆಡೆ ಟೀಮ್ ಇಂಡಿಯಾವನ್ನು ವಿರಾಟ್ ಬದಲು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೇ ಹೆಡ್ ಕೋಚ್ ಆಗಿ ರವಿಶಾಸ್ತ್ರಿ ಬದಲು ರಾಹುಲ್ ದ್ರಾವಿಡ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.