Virat kohli- ಅಂದು ತಿಂಡಿ ಪೋತ.. ಅಹಂಕಾರಿ.. ಇಂದು ವಿಶ್ವ ಕ್ರಿಕೆಟ್ ನ ರೋಲ್ ಮಾಡೆಲ್..!

ಇದು ಸುಮಾರು 15 ವರ್ಷಗಳ ಹಿಂದೆ. ವಿರಾಟ್ ಕೊಹ್ಲಿ ತುಂಟ ಹುಡುಗನಾಗಿದ್ದರು. ಆದ್ರೆ ವರ್ತನೆಯಲ್ಲಿ ಅಹಂಕಾರಿಯಾಗಿದ್ದರು. ಅದಕ್ಕಾಗಿಯೇ ಬಡಾ ಖಲೀಫಾ ಬನ್ ಗಯಾ ಹೈ ಅಂತ ಮಾತನಾಡುತ್ತಿದ್ದರು. ತಿಂಡಿ ಪೋತನಾಗಿದ್ದ ವಿರಾಟ್ ಕೊಹ್ಲಿ ಊಟಕ್ಕಾಗಿ ಕಿಲೋ ಮೀಟರ್ ಗಟ್ಟಲೇ ಸುತ್ತಾಡುತ್ತಿದ್ದರು.
ಆದ್ರೆ ಈಗ ವಿರಾಟ್ ಬದಲಾಗಿದ್ದಾರೆ. ಹಾಗಂತ ತುಂಟತನದಲ್ಲಿ ಬದಲಾವಣೆಯಾಗಿಲ್ಲ. ಆದ್ರೆ ಪ್ರಬುದ್ಧರಾಗಿದ್ದಾರೆ. ಅಹಂಕಾರಿಯಾಗಿದ್ರೂ ವರ್ತನೆಯಲ್ಲಿ ಆಕ್ರಮಣಕಾರಿ ಪ್ರವೃತ್ತಿ ಹಾಗೇ ಇದೆ. ಬಡಾ ಖಲೀಫಾ ಬನ್ ಗಯಾ ಹೈ ಅಂತ ಮಾತನಾಡಿಕೊಂಡವರು ಈಗ ಆತ್ಮವಿಶ್ವಾಸದ ವ್ಯಕ್ತಿ ಅಂತ ಕರೆಯುತ್ತಿದ್ದಾರೆ. ಹೊಟ್ಟೆ ಬಾಕನಾಗಿದ್ದ ವಿರಾಟ್ ಕೊಹ್ಲಿ ಈಗ ಫಿಟ್ ನೆಸ್ ಪಾಠ ಮಾಡುತ್ತಿದ್ದಾರೆ. ಅಬ್ಬಾ ಇಷ್ಟೊಂದು ಬದಲಾವಣೆಯಾ ಅಂತ ಹೇಳಬಹುದು.
ಹೌದು, ವಿರಾಟ್ ಕೊಹ್ಲಿ ಬದಲಾಗಿದ್ದಾರೆ. ಬದಲಾವಣೆ ಮಾಡಿಕೊಂಡಿದ್ದಾರೆ. ಯಾಕಂದ್ರೆ ಅದೆಲ್ಲವೂ ಕ್ರಿಕೆಟ್ ಮೇಲಿನ ಪ್ರೀತಿಗೋಸ್ಕರ.. ಕ್ರಿಕೆಟ್ ಮೇಲಿನ ಬದ್ದತೆಗೋಸ್ಕರ.. ಕ್ರಿಕೆಟ್ ನಲ್ಲಿ ಮಾಡಬೇಕಾದ ಸಾಧನೆಗೋಸ್ಕರ.. ಎಲ್ಲವನ್ನು ಬದಲಾವಣೆ ಮಾಡಿಕೊಂಡು ಇಂದು ಯುವ ಕ್ರಿಕೆಟಿಗರಿಗೆ ಮಾದರಿ ಆಟಗಾರನಾಗಿ ರೂಪುಗೊಂಡಿದ್ದಾರೆ. Virat Kohlis U-19 teammates share stories ahead of 100th Test

ಇದೀಗ ವಿರಾಟ್ ಕೊಹ್ಲಿ ತನ್ನ ಟೆಸ್ಟ್ ಕ್ರಿಕೆಟ್ ಬದುಕಿನ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಈ ವೇಳೆಯಲ್ಲಿ ವಿರಾಟ್ ಕೊಹ್ಲಿಯವರ ಬಾಲ್ಯದ ಒಡನಾಡಿಗಳು ಕೆಲವೊಂದು ಸ್ವಾರಸ್ಯಕರವಾದ ವಿಷಯಗಳನ್ನು ನೆನಪು ಮಾಡಿಕೊಂಡಿದ್ದಾರೆ.
ನೋಡು ಆತನ ಅಹಂ. ಆತನ ವರ್ತನೆಯೇ ಸರಿ ಇಲ್ಲ ಅಂತ ಹೇಳುತ್ತಿದ್ದರು. ಆದ್ರೆ ವಿರಾಟ್ ಸ್ವಭಾವವೇ ಹಾಗಿತ್ತು. ಮುಂದೇ ಅದುವೇ ಆಕ್ರಮಣಕಾರಿಯಾಗಿ ಆಡಲು ಸಹಾಯ ಮಾಡಿತ್ತು. ಹಾಗೇ ಕೆಲವು ಮಾಜಿ ಆಟಗಾರರು ಬಡಾ ಖಲೀಫಾ ಬನ್ ಗಯಾ ಹೈ ಅಂದ್ರು. ಆದ್ರೆ ಸ್ಥಿರ ಪ್ರದರ್ಶನ ನೀಡಿ ಅದಕ್ಕು ಉತ್ತರ ನೀಡಿದ್ರು. ಕೊನೆಗೆ ವಿರಾಟ್ ವರ್ತನೆ ಬಗ್ಗೆ ಮಾತನಾಡಿದವರು ಇಂದು ಮೆಚ್ಚುಗೆಯ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿಯವರನ್ನು ಆತ್ಮವಿಶ್ವಾಸದ ವ್ಯಕ್ತಿ ಅಂತ ಬಣ್ಣಿಸುತ್ತಿದ್ದಾರೆ- ಹಾಗಂತ ಹೇಳಿದ್ದು ತನ್ಮಯ್ ಶ್ರೀವತ್ಸವ. ತನ್ಮಯ್ ಅವರು 2007-08ರ 19 ವಯೋಮಿತಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಕೊಹ್ಲಿಯ ಜೊತೆಗೆ ಆಡಿದ್ದ ಪ್ರದೀಪ್ ಸಂಗ್ವಾನ್ ಹೇಳುವುದು ಹೀಗೆ.. ವಿರಾಟ್ ಬಾಲ್ಯದಲ್ಲಿ ಸಿಕ್ಕಾಪಟ್ಟೆ ತಿನ್ನುತ್ತಿದ್ದರು. ಮಟನ್ ರೈಸ್, ಹೀಗೆ ಸಿಕ್ಕಿದ್ದನ್ನೆಲ್ಲಾ ತಿನ್ನುವುದು ಕೊಹ್ಲಿಯ ಅಭ್ಯಾಸ. ತಿನ್ನಲು ಕಿಲೋ ಮೀಟರ್ ಗಟ್ಟಲೇ ಸುತ್ತಾಡುತ್ತಿದ್ದರು. ಆದ್ರೆ 2010ರಲ್ಲಿ ನನಗೆ ಆಶ್ಚರ್ಯವಾಗಿತ್ತು. ದೆಹಲಿ ರಣಜಿ ಟೂರ್ನಿಯ ವೇಳೆಯಲ್ಲಿ ವಿರಾಟ್ ನನ್ನು ನೋಡಿದಾಗ ಇಷ್ಟೊಂದು ಬದಲಾವಣೆಯಾಗಿದ್ದಾರ ಅಂತ ಅನ್ನಿಸಿತ್ತು. ಭೋಜನ ವಿರಾಮದ ವೇಳೆ ವಿರಾಟ್ ಊಟ ತಟ್ಟೆಯಲ್ಲಿ ಮಟನ್ – ರೈಸ್ ಇರಲಿಲ್ಲ. ಬದಲಾಗಿ ಅಲ್ಲಿ ಡಯಡ್ ಫುಡ್ ಗಳಿದ್ದವು ಎಂದು ಪ್ರದೀಪ್ ಸಂಗ್ವಾನ್ ವಿರಾಟ್ ಕೊಹ್ಲಿಯ ಆಹಾರ ಪದ್ದತಿ ಬದಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.