Virat kohli – ಎಲ್ಲಿ… ಯಾವಾಗ.. ಯಾರ ವಿರುದ್ಧ.. ವಿರಾಟ್ ದಾಖಲಿಸಿದ್ದ 27 ಶತಕಗಳ ಪಟ್ಟಿಯೇ ರೋಚಕ..!

ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದಾರೆ. 2019ರ ನವೆಂಬರ್ 22ರ ನಂತರ ವಿರಾಟ್ ಬ್ಯಾಟ್ ನಿಂದ ಶತಕ ದಾಖಲಾಗಿಲ್ಲ. ತನ್ನ ಟೆಸ್ಟ್ ಕ್ರಿಕೆಟ್ ನ ಬದುಕಿನಲ್ಲಿ ಕಳೆದ ಮೂರು ವರ್ಷ ಶತಕ ದಾಖಲಿಸಿಲ್ಲ. ಆದ್ರೂ ಕಳೆದ ಹತ್ತು ವರ್ಷಗಳ ಟೆಸ್ಟ್ ಕ್ರಿಕೆಟ್ ಜರ್ನಿಯ ಪ್ರತಿ ಶತಕಗಳು ಕೂಡ ರೋಚಕವಾಗಿದ್ದವು. ಯಾವ ವರ್ಷ, ಯಾವ ತಂಡ, ಎಲ್ಲಿ ಶತಕ ದಾಖಲಿಸಿದ್ದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. King kohli – List of international cricket centuries by Virat Kohli
ವಿರಾಟ್ ಕೊಹ್ಲಿಯವರ 27 ಟೆಸ್ಟ್ ಶತಕಗಳ ಪಟ್ಟಿ
1- ಜನವರಿ 24, 2012- ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್ – 116 ರನ್ – ಫಲಿತಾಂಶ ಸೋಲು
2 – ಆಗಸ್ಟ್ 31, 2012 – ನ್ಯೂಜಿಲೆಂಡ್ ವಿರುದ್ಧ ಚಿನ್ನಸ್ವಾಮಿ ಮೈದಾನ – 103 ರನ್ – ಫಲಿತಾಂಶ ಗೆಲುವು
3- ಡಿಸೆಂಬರ್ 13- 2012- ಇಂಗ್ಲೆಂಡ್ ವಿರುದ್ಧ ವಿದರ್ಭ ಅಂಗಣ – – 107 ರನ್ -ಫಲಿತಾಂಶ ಡ್ರಾ
4-ಫೆಬ್ರವರಿ 22, 2013- ಆಸ್ಟ್ರೇಲಿಯಾ ವಿರುದ್ಧ ಎಮ್.ಎ.ಚಿದಂಬರಂ ಅಂಗಣ – 107 ರನ್ -ಫಲಿತಾಂಶ – ಗೆಲುವು
5-ಡಿಸೆಂಬರ್ 18, 2013- ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ ಬರ್ಗ್ – 119 ರನ್, ಫಲಿತಾಂಶ- ಡ್ರಾ
6- ಫೆಬ್ರವರಿ 14, 2014 – ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ – ಅಜೇಯ 105 ರನ್ -ಫಲಿತಾಂಶ- ಡ್ರಾ
7-ಡಿಸೆಂಬರ್ 2014 – ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್ – 115 ರನ್ -ಫಲಿತಾಂಶ – ಸೋಲು
8-ಡಿಸೆಂಬರ್ 9, 2014- ಆಸ್ಟ್ರೇಲಿಯಾ ವಿರುದ್ಧ ಆಡಿಲೇಡ್ – 141 ರನ್ -ಫಲಿತಾಂಶ – ಸೋಲು
9-ಡಿಸೆಂಬರ್ 26, 2014 – ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ – 169 ರನ್ -ಫಲಿತಾಂಶ – ಡ್ರಾ
10- ಜನವರಿ 6, 2015 – ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ – 147 ರನ್ -ಫಲಿತಾಂಶ -ಡ್ರಾ
11- – ಆಗಸ್ಟ್ 12, 2015- ಶ್ರೀಲಂಕಾ ವಿರುದ್ಧ ಗಾಲೆ ಅಂಗಣ 103 ರನ್-ಫಲಿತಾಂಶ- ಸೋಲು
12- ಜುಲೈ 21, 2016- ವೆಸ್ಟ್ ಇಂಡೀಸ್ ವಿರುದ್ಧ ಸರ್ ವಿವಿಎನ್ ರಿಚಡ್ರ್ಸ್ ಅಂಗಣ – 200 ರನ್ -ಫಲಿತಾಂಶ- ಗೆಲುವು
13 – ಅಕ್ಟೋಬರ್ 8, 2016- ನ್ಯೂಜಿಲೆಂಡ್ ವಿರುದ್ಧ ಇಂದೋರ್ ಅಂಗಣ – 211 ರನ್ – ಫಲಿತಾಂಶ- ಗೆಲುವು
14- ನವೆಂಬರ್ 17, 2016- ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂ ಅಂಗಣ – 167 ರನ್ -ಫಲಿತಾಂಶ- ಗೆಲುವು
15- ಡಿಸೆಂಬರ್ 8, 2016- ಇಂಗ್ಲೆಂಡ್ ವಿರುದ್ಧ ವಾಂಖೇಡೆ ಅಂಗಣ – 235 ರನ್ -ಫಲಿತಾಂಶ- ಗೆಲುವು
16- ಫೆಬ್ರವರಿ 9, 2017 – ಬಾಂಗ್ಲಾದೇಶ ವಿರುದ್ಧ ಹೈದ್ರಬಾದ್ ಅಂಗಣ – 204 ರನ್ -ಫಲಿತಾಂಶ- ಗೆಲುವು
17- ಜುಲೈ 26, 2017 – ಶ್ರೀಲಂಕಾ ವಿರುದ್ಧ ಗಾಲೆ ಅಂಗಣ – – ಅಜೇಯ 103 ರನ್ – ಫಲಿತಾಂಶ- ಗೆಲುವು
18-ನವೆಂಬರ್ 16, 2017- ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ಅಂಗಣ – ಅಜೇಯ 104 ರನ್ -ಫಲಿತಾಂಶ- ಡ್ರಾ
19- ನವೆಂಬರ್ 24, 2017- ಶ್ರೀಲಂಕಾ ವಿರುದ್ಧ ವಿದರ್ಭ ಅಂಗಣ – 213 ರನ್ -ಫಲಿತಾಂಶ- ಗೆಲುವು
20- ಡಿಸೆಂಬರ್ 2, 2017 – ಶ್ರೀಲಂಕಾ ವಿರುದ್ಧ ಫಿರೋಜ್ ಶಾ ಕೋಟ್ಲಾ ಅಂಗಣ – 243 ರನ್ – ಫಲಿತಾಂಶ- ಡ್ರಾ
21-ಜನವರಿ 13, 2018- ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಅಂಗಣ – 153 ರನ್ – ಫಲಿತಾಂಶ- ಸೋಲು
22- ಆಗಸ್ಟ್ 1, 2018- ಇಂಗ್ಲೆಂಡ್ ವಿರುದ್ಧ ಎಡ್ಜ್ ಬಾಸ್ಟನ್ ಅಂಗಣ – 149 ರನ್ -ಫಲಿತಾಂಶ- ಗೆಲುವು
23- ಆಗಸ್ಟ್ 18, 2018- ಇಂಗ್ಲೆಂಡ್ ವಿರುದ್ಧ ಟ್ರೆಂಟ್ ಬ್ರಿಡ್ಜ್ ಅಂಗಣ – 103 ರನ್ -ಫಲಿತಾಂಶ- ಗೆಲುವು
24- ಅಕ್ಟೋಬರ್ 4, 2018- ವೆಸ್ಟ್ ಇಂಡೀಸ್ ವಿರುದ್ದ ರಾಜಕೋಟ್ ಅಂಗಣ – 139 ರನ್ – ಫಲಿತಾಂಶ- ಗೆಲುವು
25- ಡಿಸೆಂಬರ್ 14, 2018- ಆಸ್ಟ್ರೇಲಿಯಾ ವಿರುದ್ಧ ಪರ್ತ್ ಅಂಗಣ – 123 ರನ್ -ಫಲಿತಾಂಶ- ಸೋಲು
26-ಅಕ್ಟೋಬರ್ 10, 2019- ದಕ್ಷಿಣ ಆಫ್ರಿಕಾ ವಿರುದ್ಧ ಎಮ್ಸಿಎ ಅಂಗಣ ಪುಣೆ – ಅಜೇಯ 254 ರನ್ -ಫಲಿತಾಂಶ- ಗೆಲುವು
27- ನವೆಂಬರ್ 22, 2019- ಬಾಂಗ್ಲಾದೇಶ ವಿರುದ್ಧ – ಈಡನ್ ಗಾರ್ಡನ್ ಅಂಗಣ – 136 ರನ್ – ಫಲಿತಾಂಶ- ಗೆಲುವು
ಒಟ್ಟಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಮಳೆಯನ್ನೇ ಸುರಿಸಿದ್ದಾರೆ.