Virat Kohli: ಏನಿದು ಕೊಹ್ಲಿ ಟ್ವೀಟ್ನ ಮರ್ಮ..? ಸೂಚ್ಯವಾಗಿ ಕಿಂಗ್ ಕೊಹ್ಲಿ ಹೇಳಿದ್ದೇನು..?

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಈಗ ಫಾರ್ಮ್ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ರನ್ಬರ ಎದುರಿಸುತ್ತಿರುವ ವಿರಾಟ್ ಮೈದಾನದ ಪ್ರದರ್ಶನಕ್ಕೆ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿನ ಸ್ಥಾನ ಕೂಡ ಪ್ರಶ್ನಾರ್ಥಕವಾಗಿದೆ.
ವಿರಾಟ್ಗೆ ಬಿಸಿಸಿಐ ಕೂಡ ತಂಡದಿಂದ ಗೇಟ್ಪಾಸ್ ಕೊಡಲು ಪರದಾಡುತ್ತಿದೆ. ಆದರೆ ಈ ಮಧ್ಯೆ ವಿರಾಮ ಅನ್ನುವ ನೆಪದಿಂದ ವಿರಾಟ್ರನ್ನು ತಂಡದಿಂದ ದೂರ ಇಟ್ಟಿದೆ. ಕ್ಯಾಪ್ಟನ್ಸಿ ಬಿಟ್ಟ ಮೇಲೆ ವಿರಾಟ್ ಒತ್ತಡದಲ್ಲಿ ಆಡುತ್ತಿದ್ದಾರೆ ಅನ್ನುವ ಭಾವನೆಯೂ ಮೂಡುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ಪ್ರವಾಸದ ಕಡೆಯ ಪಂದ್ಯ ಮುಗಿದ ಮೇಲೆ ವಿರಾಟ್ಗೆ ಮತ್ತೆ ವಿರಾಮ ನೀಡಲಾಗಿದೆ.

ಈ ನಡುವೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ಮಾಡಿರುವ ಪೋಸ್ಟ್ ಚಿಂತನೆಗೆ ಹಚ್ಚುವಂತಿದೆ. ಕಲಾವಿದರೊಬ್ಬರು ರಚಿಸಿರುವ ಚಿತ್ರದ ಬಳಿ ಫೋಟೋ ತೆಗೆದುಕೊಂಡಿರುವ ವಿರಾಟ್, “ವಾಟ್ ಇಫ್ ಐ ಫಾಲ್.. ಬಟ್ ಮೈ ಡಾರ್ಲಿಂಗ್, ವಾಟ್ ಇಫ್ ಯು ಫ್ಲೈ” ಎಂದು ಬರೆದಿದೆ. ನಾನು ಕೆಳಗೆ ಬಿದ್ದರೆ ಏನಾಗುತ್ತೆ.. ಮೈ ಡಾರ್ಲಿಂಗ್.. ನೀನು ಹಾರುತ್ತಿದ್ದಿಯಲ್ಲ” ಎಂದು ಆ ಪೇಂಟಿಂಗ್ ಬಳಿ ಬರೆಯಲಾಗಿದೆ. ಕೊಹ್ಲಿ ಫಾರ್ಮ್ ಅನ್ನು ಟೀಕಿಸುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಈ ಟ್ವೀಟ್ ವೈರಲ್ ಆಗುತ್ತಿದೆ.
ವಿರಾಟ್ ಈ ಟ್ವೀಟ್ನ ಅರ್ಥವನ್ನು ಬೇರೆ ಬೇರೆಯಾಗಿ ಮಾಡಲಾಗುತ್ತಿದೆ. ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗುವ ಸೂಚನೆ ವಿರಾಟ್ ನೀಡುತ್ತಿದ್ದರಾ ಅನ್ನುವ ಪ್ರಶ್ನೆಯೂ ಇದೆ. ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಸ್ಥಾನ ಪಡೆಯುವುದು ಸಂದೇಹವಾಗಿರುವಾಗಲೇ ಈ ಟ್ವೀಟ್ ಮಾಡಿರುವುದು ಕುತೂಹಲ ಮೂಡಿಸಿದೆ.