Virat Khohli – Babar Babar Azam – ಧನ್ಯವಾದ ಬಾಬರ್.. ಬೆಸ್ಟ್ ಆಫ್ ಲಕ್ – ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಎಲ್ಲಾ ಕಡೆಗಳಿಂದ ಟೀಕೆಗಳು ವ್ಯಕ್ತವಾಗುತ್ತಿದ್ರೆ ಮತ್ತೊಂದು ಕಡೆ ಅವರಿಗೆ ಬೆಂಬಲ ನೀಡಿ ಮಾನಸಿಕವಾಗಿ ಗಟ್ಟಿಗೊಳ್ಳುವಂತೆ ಮಾಡುತ್ತಿದ್ದಾರೆ ವಿಶ್ವ ಕ್ರಿಕೆಟಿಗರು.
ಅದರಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರು ವಿರಾಟ್ ಗೆ ಬೆಂಬಲವಾಗಿ ಟ್ವಿಟ್ ಮಾಡಿದ್ದರು. ಕೆಟ್ಟ ಸಮಯ ಮುಗಿದು ಹೋಗುತ್ತದೆ. ದೃಢವಾಗಿರಿ ಎಂದು ಟ್ವಿಟ್ ಮಾಡಿದ್ದರು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಬಾಬರ್ ಅಝಮ್ ಅವರ ಕ್ರೀಡಾ ಸ್ಪೂರ್ತಿ ಮೆಚ್ಚುಗೆಗೂ ಪಾತ್ರವಾಗಿತ್ತು.
ಆದ್ರೆ ವಿರಾಟ್ ಕೊಹ್ಲಿ ಸಡನ್ ಆಗಿ ಬಾಬರ್ ಅಝಮ್ ಅವರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಅವರು, ವಿರಾಟ್ ಕೊಹ್ಲಿ, ಬಾಬರ್ ಅಝಮ್ ಅವರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಬೇಕಿತ್ತು ಎಂದು ಹೇಳಿದ್ದರು.
ಇದೀಗ ಎರಡು ದಿನಗಳ ಬಳಿಕ ವಿರಾಟ್ ಕೊಹ್ಲಿ ಬಾಬರ್ ಅಝಮ್ ಅವರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಥ್ಯಾಂಕ್ಯೂ ಕೀಪ್ ಶೈನಿಂಗ್ ಆಂಡ್ ರೈಸಿಂಗ್ ..ವಿಶ್ ಯೂ ಆಲ್ ದಿ ಬೆಸ್ಟ್ ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಪ್ರತಿಕ್ರಿಯೆಗೆ ಅಭಿಮಾನಿಗಳಿಂದ ಲಕ್ಷಾಂತರ ಕಮೆಂಟ್‍ಗಳು ಕೂಡ ಬಂದಿವೆ. ಕ್ರೀಡೆ ಗೌರವ ನೀಡುತ್ತದೆ ಮತ್ತು ಗೌರವಿಸಲ್ಪಡುತ್ತದೆ ಎಂಬುದಕ್ಕೆ ಬಾಬರ್ ಅಝಮ್ ಮತ್ತು ವಿರಾಟ್ ಕೊಹ್ಲಿ ಅವರು ಪರಸ್ಪರ ಮಾಡಿಕೊಂಡ ಟ್ವಿಟರ್ ನ ಸಂದೇಶಗಳೇ ಸಾಕ್ಷಿ.
ಇನ್ನು ಬಾಬರ್ ಅಝಮ್ ಅವರು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ತಾನು ಯಾಕೆ ಟ್ವಿಟ್ ಮಾಡಿದ್ದೇನೆ ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ.
ಒಬ್ಬ ಆಟಗಾರನಾಗಿ ನನಗೂ ಗೊತ್ತಿದೆ. ಕೆಟ್ಟ ಫಾರ್ಮ್ ಯಾವ ರೀತಿ ಆಟಗಾರರನ್ನು ಧೃತಿಗೆಡಿಸುತ್ತೆ ಎಂಬುದು. ಆಗ ಆಟಗಾರನಿಗೆ ಬೇಕಾಗಿರುವುದು ಬೆಂಬಲ ಮಾತ್ರ. ನನ್ನ ಟ್ವಿಟ್ ನಿಂದ ಅವರಿಗೆ ಸ್ವಲ್ಪ ಮಟ್ಟಿಗೆ ಬೆಂಬಲ ಸಿಗಬಹುದು ಎಂದು. ವಿರಾಟ್ ಶ್ರೇಷ್ಠ ಆಟಗಾರ ಎಂದು ಬಾಬರ್ ಅಝಮ್ ಹೇಳಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಾದ್ರೂ ಫಾರ್ಮ್‍ಗೆ ಬರ್ತಾರಾ ಅನ್ನೋದನ್ನು ಕಾದು ನೋಡಬೇಕು.