ಆಸ್ಟ್ರೇಲಿಯಾದ ಉಪ ಪ್ರಧಾನಿಗೆ ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಉಡುಗೊರೆಯಾಗಿ ನೀಡಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಕೇಂದ್ರ ವಿದೇಶಾಂಗ ಸಚಿವ ಆಸ್ಟ್ರೇಲಿಯಾಕ್ಕೆ ತೆರೆಳಿದ್ದರು. ಅಲ್ಲಿನ ಉಪಪ್ರಧಾನಿಗೆ ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಉಡುಗೊರೆ ಸ್ವೀಕರಿಸಿದ ರಿಚರ್ಡ್ ಮಾರ್ಲ್ಸ್, ಕ್ರಿಕೆಟ್ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳು ನಮ್ಮಿಬ್ಬರನ್ನು ಇನ್ನಷ್ಟು ಹತ್ತಿರವಾಗಿಸಿವೆ ಎಂದಿದ್ದಾರೆ.
ಸಚಿವ ಜೈಶಂಕರ್ ಮೊನ್ನೆ ನ್ಯೂಜಿಲೆಂಡ್ ಪ್ರವಾಸದ ವೇಳೆ ಭಾರತ – ನ್ಯೂಜಿಲೆಂಡ್ ನ ಸಂಬಂಧವನ್ನು ಶ್ಲಾಘಿಸಿ ಕೋಚ್ ಗಳಾದ ಜಾನ್ ರೈಟ್ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಶ್ಲಾಘಿಸಿದರು.
ಜಾನ್ ರೈಟ್ ಅವರನ್ನು ಯಾವ ಭಾರತಿಯರು ಮರೆಯಲು ಸಾಧ್ಯವಿಲ್ಲ.ಹಾಗೆ ಸ್ಟೀಫನ್ ಫ್ಲೆಮಿಂಗ್ ಅವರನ್ನು ಐಪಿಎಲ್ ಅಭಿಮಾನಿಗಳು ಮರೆಯುವುದಿಲ್ಲ ಎಂದಿದ್ದಾರೆ.
ಜಾನ್ ರೈಟ್ ಕಾಲದಲ್ಲಿ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತು. 2003ರ ವಿಶ್ವಕಪ್ ಭಾರತ ಫೈನಲ್ ತಲುಪಿತು.
ಸದ್ಯ ಟೀಮ್ ಇಂಡಿಯಾ ಪ್ರತಿಷ್ಠಿತ ಟಿ20 ವಿಶ್ವಕಪ್ ಆಡಲು ಕಾಂಗರೂ ನಾಡಿಗೆ ಬಂದಿದೆ. ಪಶ್ವಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 13 ರನ್ ಗಳ ಗೆಲುವು ದಾಖಲಿಸಿತು.
ರನ್ ಮಷೀನ್ ವಿರಾಟ್ ಕೊಹ್ಲಿ ಕೂಡ ಟಿ20 ವಿಶ್ವಕಪ್ಗೆ ಸಜ್ಜಾಗುತ್ತಿದ್ದಾರೆ.