ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದೆ. ಟೂರ್ನಿಯ ಮೊದಲ 10 ದಿನ ಅಭಿಮಾನಿಗಳ ಲೆಕ್ಕಾಚಾರಗಳು ಬುಡಮೇಲಾಗುತ್ತಿವೆ. ಸಿಎಸ್ಕೆ, ಮುಂಬೈ ಇಂಡಿಯನ್ಸ್ನಂತಹ ಬಲಿಷ್ಠ ತಂಡಗಳೇ ಮಕಾಡೆ ಮಲಗಿವೆ. ಸತತ ಗೆಲುವು ಸಾಧಿಸಲು ತಂಡಗಳು ಹರಸಾಸಹ ಪಡುತ್ತಿವೆ. ಈ ಮಧ್ಯೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯುತ್ತಿದೆ. ಈ ರಾಯಲ್ ಬ್ಯಾಟಲ್ನಲ್ಲಿ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈ ದಾಖಲೆಗಾಗಿ ವಿರಾಟ್ಗೆ ಒಂದೇ ಒಂದು ಫೋರ್ ಬೇಕಾಗಿದೆ.
ವಿರಾಟ್ 1 ಬೌಂಡರಿ ಬಾರಿಸಿದರೆ ಐಪಿಎಲ್ ನಲ್ಲಿ 550 ಬೌಂಡರಿಗಳನ್ನು ಸಿಡಿಸಿದಂತಾಗುತ್ತದೆ. 550 ಬೌಂಡರಿಗಳ ಸಹಿತ 200 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಅವರು ಇಲ್ಲಿಯವರೆಗೆ 664 ಬೌಂಡರಿಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, ವಿರಾಟ್ ಎರಡನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ 526 ಬೌಂಡರಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು 355 ಸಿಕ್ಸರ್ ಗಳ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ ಇದುವರೆಗೆ 212 ಸಿಕ್ಸರ್ ಗಳೊಂದಿಗೆ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.