Team india – ಬಯೋಬಬಲ್ ಬ್ರೇಕ್ ಮಾಡಿದ ವಿರಾಟ್ ಮತ್ತು ರಿಷಬ್ ಪಂತ್..!

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ಉಪನಾಯಕ ರಿಷಬ್ ಪಂತ್ ಅವರು ಬಿಸಿಸಿಐನ ಬಯೋಬಬಲ್ ಬ್ರೇಕ್ ಮಾಡಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಯನ್ನು ಗೆದ್ದುಕೊಂಡಿದೆ. 2-0ಯಿಂದ ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ ಅಂತಿಮ ಪಂದ್ಯವನ್ನು ಫೆಬ್ರವರಿ 20ರಂದು ಆಡಲಿದೆ. ಆದ್ರೆ ಸರಣಿ ಮುಗಿಯುವ ಮುನ್ನವೇ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ತಂಡದಿಂದ ಹೊರಬಂದಿದ್ದಾರೆ. ಮೂರನೇ ಟಿ-20 ಪಂದ್ಯಕ್ಕೆ ಇವರಿಬ್ಬರು ಲಭ್ಯರಿಲ್ಲ.
ಹಾಗಂತ ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಬೇಕಂತಲೇ ಬಯೋಬಬಲ್ ಬ್ರೇಕ್ ಮಾಡಿಲ್ಲ. ಇದಕ್ಕೆ ಕಾರಣ ಬಿಸಿಸಿಐ. Virat Kohli, Rishabh Pant given bio-bubble break by BCCI
ಹೌದು, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಮುಂದಾಗಿದೆ. ಮಾರ್ಚ್ ಮೊದಲ ವಾರ ಶ್ರೀಲಂಕಾ ವಿರುದ್ದ ಟೆಸ್ಟ್ ಸರಣಿ ಆರಂಭವಾಗಲಿದೆ. ಹೀಗಾಗಿ ಇವರಿಬ್ಬರಿಗೆ ವಿಶ್ರಾಂತಿ ನೀಡಲಾಗಿದೆ.
ಅದ್ರಲ್ಲೂ ವಿರಾಟ್ ಕೊಹ್ಲಿಗೆ ಶ್ರೀಲಂಕಾ ಸರಣಿಯ ಮೊದಲ ಟೆಸ್ಟ್ ಪಂದ್ಯ ಸ್ಮರಣೀಯ ಪಂದ್ಯವಾಗಲಿದೆ. ಕೊಹ್ಲಿ ತನ್ನ ಟೆಸ್ಟ್ ಕ್ರಿಕೆಟ್ ಬದುಕಿನ ನೂರನೇ ಪಂದ್ಯವನ್ನು ಮೊಹಾಲಿಯಲ್ಲಿ ಆಡಲಿದ್ದಾರೆ. ವಿರಾಟ್ ಮತ್ತು ರಿಷಬ್ ಪಂತ್ ಏಕದಿನ ಸರಣಿಯ ಮೂರು ಪಂದ್ಯಗಳನ್ನು ಆಡಿದ್ದರು. ಹಾಗೇ ಟಿ-20 ಸರಣಿಯ ಎರಡು ಪಂದ್ಯಗಳನ್ನು ಆಡಿದ್ದಾರೆ. ಅದ್ರಲ್ಲೂ ಎರಡನೇ ಪಂದ್ಯದಲ್ಲಿ ಕೊಹ್ಲಿ ಮತ್ತು ಪಂತ್ ಆಕರ್ಷಕ ಅರ್ಧಶತಕ ದಾಖಲಿಸಿದ್ರು.